ಉದಯವಾಹಿನಿ, ಪೂರ್ವ ಜೆರುಸಲೆಮ್‌ನಲ್ಲಿ ಇಸ್ರೇಲ್ ಬುಲ್ಲೋಜರ್ ಕಾರ್ಯಾಚರಣೆ ನಡೆಸಿದ್ದು ನಾಲ್ಕು ಅಂತಸ್ತಿನ ವಸತಿ ಕಟ್ಟಡವನ್ನು ಕೆಡವಿದೆ. ಪರಿಣಾಮ ನೂರಾರು ಪ್ಯಾಲೆಸ್ಟೀನಿಯನ್ನರು ರಾತ್ರೋರಾತ್ರಿ ಮನೆ ಕಳೆದುಕೊಂಡಿದ್ದಾರೆ. ಅತಿದೊಡ್ಡ ಧ್ವಂಸ ಕಾರ್ಯಾಚರಣೆ ಇದಾಗಿದೆ. ಹಳೆಯ ನಗರದ ಬಳಿಯ ಸಿಲ್ವಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕಟ್ಟಡವು ಒಂದು ಡಜನ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು ಸುಮಾರು 100 ಜನರನ್ನು ವಾಸಿಸುತ್ತಿದ್ದರು.
ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಲೋಜ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯೂ ಎಲ್ಲಾ ನಿವಾಸಿಗಳಿಗೆ ಒಂದು ದುಸ್ವಪ್ನವಾಗಿದೆ ಎಂದು ಕಟ್ಟಡದ ನಿವಾಸಿ ಈದ್ ಶಾವರ್ ತಿಳಿಸಿದರು. ನಾವು ಮಲಗಿದ್ದಾಗ ಇಸ್ರೇಲಿ ಅಧಿಕಾರಿಗಳು ಬಾಗಿಲು ತಟ್ಟಿದರು. ನಾವು ನಮ್ಮ ಬಟ್ಟೆಗಳನ್ನು ಬದಲಾಯಿಸಿ, ಪ್ರಮುಖ ಕಾಗದಪತ್ರಗಳು ಮತ್ತು ದಾಖಲೆಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದರು ಎಂದು ನಿವಾಸಿಗಳು ಆರೋಪಿಸಿದರು.
ಏಳು ಜನರ ಕುಟುಂಬವು ಬೇರೆಲ್ಲಿಯೂ ಹೋಗದೆ ತಮ್ಮ ಕಾರಿನಲ್ಲಿ ಮಲಗಬೇಕಾಯಿತು ಎಂದು ಶಾವರ್ ಹೇಳಿದರು. ಮೂರು ಬುಲ್ಲೋಜರ್‌ಗಳು ಕಟ್ಟಡವನ್ನು ಕೆಡವಲು ಪ್ರಾರಂಭಿಸಿತು. ಇಸ್ರೇಲಿ ಪೊಲೀಸರು ಸುತ್ತಮುತ್ತಲಿನ ಬೀದಿಗಳನ್ನು ಸುತ್ತುವರೆದರು. ಪ್ರದೇಶದಾದ್ಯಂತ ಮತ್ತು ನೆರೆಯ ಮನೆಗಳ ಮೇಲ್ಬಾವಣಿಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಖಾಸಗಿ ಒಡೆತನದ ಪ್ಯಾಲೆಸ್ಟೀನಿಯನ್ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಪರವಾನಗಿ ಇಲ್ಲದ ಕಾರಣ ಕೆಡವಲು ಯೋಜಿಸಲಾಗಿದೆ.
