ಉದಯವಾಹಿನಿ, ಜೆಡ್ಡಾ: ಪವಿತ್ರ ಹಜ್‌ ಯಾತ್ರೆಗಾಗಿ ಸೌದಿ ಅರೇಬಿಯಾ ಜೊತೆ ಭಾರತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ಜೆಡ್ಡಾದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹಜ್ ಒಪ್ಪಂದಕ್ಕೆ ಸಹಿ ಹಾಕಿದರು. 2026ರಲ್ಲಿ ಹಜ್ ಯಾತ್ರೆಗೆ ಭಾರತೀಯರ ಕೋಟಾವನ್ನು 1,75,025ಕ್ಕೆ ನಿಗದಿಪಡಿಸಲಾಗಿದೆ.
ಕಿರಣ್ ರಿಜಿಜು, ಮೂರು ದಿನಗಳ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಜೆಡ್ಡಾದಲ್ಲಿ ಸೌದಿ ಅರೇಬಿಯಾದ ಹಜ್ ಹಾಗೂ ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲ್ ರಬಿಯಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಹಜ್‌ ಯಾತ್ರೆಯ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಲಾಯಿತು. ಇನ್ನು ಹೆಚ್ಚು ಸಮನ್ವಯ ಸಾಧಿಸುವ ಬಗ್ಗೆ ಚರ್ಚಿಸಲಾಯಿತು. ಭಾರತೀಯರ ಹಜ್ ಯಾತ್ರೆಯನ್ನು ಇನ್ನಷ್ಟು ಸುಗಮಗೊಳಿಸಲು ಬದ್ಧತೆಯನ್ನು ಪುನರುಚ್ಚರಿಸಲಾಯಿತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ ಹಜ್ ಯಾತ್ರೆ ಸುಗಮವಾಗಿಸಲು ಮೂಲಸೌಕರ್ಯ, ಸಾರಿಗೆ, ವಸತಿ ಮತ್ತು ಆರೋಗ್ಯ ಸೇವೆ ಸುಧಾರಿಸುವ ಬಗ್ಗೆ ಗಮನ ಹರಿಸಲಾಯಿತು. ಇದಕ್ಕೂ ಮುನ್ನ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ಭಾರತೀಯ ಕಾನ್ಸುಲೇಟ್ ಜನರಲ್‌ ಅಧಿಕಾರಿಗಳೊಂದಿಗೆ ರಿಜಿಜು ಸಭೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!