
ಉದಯವಾಹಿನಿ, ಲುವಂಡ : ರಾಷ್ಟ್ರಪತಿ ದೌಪದಿ ಮುರ್ಮು ಅಂಗೋಲದಲ್ಲಿ ಅಧಿಕೃತ ಪ್ರವಾಸದಲ್ಲಿದ್ದಾರೆ. ಭೇಟಿಯ ಮೊದಲ ದಿನ ಅಂಗೋಲ ಮತ್ತು ಭಾರತ ದೇಶಗಳು ಮೀನುಗಾರಿಕೆ, ಜಲಚರ ಸಾಕಣೆ ಮತ್ತು ಸಮುದ್ರ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ.
ನವೆಂಬರ್ 8ರಿಂದ 11ರವರೆಗೆ ನಾಲ್ಕು ದಿನ ಮುರ್ಮು ಅವರು ಅಂಗೋಲ ಪ್ರವಾಸದಲ್ಲಿರಲಿದ್ದಾರೆ. ಇದು ಭಾರತದ ರಾಷ್ಟ್ರಪತಿಯೊಬ್ಬರು ಅಂಗೋಲಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.ಮುರ್ಮು ಅವರನ್ನು ಅಂಗೋಲದ ಅಧ್ಯಕ್ಷ ಜೊವಾವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲೌರೆನ್ನೊ ಅವರು ಸ್ವಾಗತಿಸಿದರು. ನಂತರ ಇಬ್ಬರು ನಾಯಕರು ನಿಯೋಗ ಮಟ್ಟದ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದರು.
