ಉದಯವಾಹಿನಿ: ಕಾಂತಾರ ನಟಿ ರುಕ್ಮಿಣಿ ವಸಂತ್‌ಗೆ ಸೈಬರ್ ಕಾಟ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಸೈಬರ್ ಕಿರುಕುಳಕ್ಕೆ ಒಳಗಾದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ನಟಿಯ ಕುರಿತಾಗಿ ಅನುಚಿತ ವರ್ತನೆ, ಮಾರ್ಫಿಂಗ್ ಚಿತ್ರಗಳನ್ನ ಮಾಡಿ ಪೋಸ್ಟ್ ಮಾಡುತ್ತಿದ್ದ ಸೈಬರ್ ಕಿರುಕುಳದ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ವಿಶೇಷ ಅಂದ್ರೆ ಈ ಅಪರಾಧ ಎಸಗಿದ್ದು ತಮಿಳುನಾಡಿನ 20 ವರ್ಷ ವಯಸ್ಸಿನ ಯುವತಿ ಎನ್ನುವುದಾಗಿದೆ.
ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಯಿಂದ ಮಾರ್ಫಿಂಗ್ ಮಾಡಲಾದ ಫೋಟೋಗಳು ಹಾಗೂ ಅನುಚಿತ ವಿಷಯವನ್ನೊಳಗೊಂಡ ಫೋಟೋಗಳನ್ನ ಪೋಸ್ಟ್ ಮಾಡಲಾಗುತ್ತಿದ್ದ ವಿಚಾರ ಅನುಪಮ ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದ ಕೂಡಲೇ ಸೈಬರ್ ಅಪರಾಧ ವಿಭಾಗಕ್ಕೆ ದೂರು ಕೊಡುತ್ತಾರೆ ಅನುಪಮ. ಹೀಗೆ ಅನುಪಮಾ ಆನ್‌ಲೈನ್‌ನಲ್ಲಿ ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಪತ್ತೆಯಾದ ಬಳಿಕ ಅಚ್ಚರಿಗೊಂಡಿದ್ದಾರೆ. ಬಂಧಿಸಿ ಕರೆತಂದಾಗ ಆಕೆ 20 ವರ್ಷದ ಯುವತಿ ಅನ್ನುವುದು ಗೊತ್ತಾಗಿದೆ. ಆಕೆ ಪರಿಪರಿಯಾಗಿ ಬೇಡಿಕೊಂಡ ಪರಿಣಾಮ ಆಕೆಯ ಗುರುತು, ವಿಳಾಸ ಬಹಿರಂಗಪಡಿಸದಿರಲು ಅನುಪಮಾ ನಿರ್ಧರಿಸಿದ್ದಾರಂತೆ.

Leave a Reply

Your email address will not be published. Required fields are marked *

error: Content is protected !!