ಉದಯವಾಹಿನಿ: ಅತಿಯಾದ ವಾಹನಗಳ ಬಳಕೆ, ಕಾರ್ಖಾನೆಯಿಂದ ಹೊರಸೂಸುವ ಅನಿಲಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ. ಈ ನಡುವೆ ಮನೆಯೊಳಗಿನ ವಾತವಾರಣ ಉತ್ತಮವಾಗಿಡುವುದು ಕೂಡ ಸವಾಲಿನ ಕೆಲಸವಾಗಿದೆ. ಆದರೆ ಕೆಲವು ಗಿಡಗಳನ್ನು ಮನೆಯೊಳಗೆ ಇಡುವುದರಿಂದ ಮನೆಯ ವಾತಾವರಣ ಉತ್ತಮವಾಗಿರುತ್ತೆ.
(Snake Plant): ಮನೆಯೊಳಗೆ ಬೆಳೆಸುವ ಪ್ರಮುಖ ಗಿಡವಾದ ಸ್ನೇಕ್ ಪ್ಲಾಂಟ್ ಕಡಿಮೆ ನೀರು ಹಾಗೂ ಕಡಿಮೆ ನಿರ್ವಹಣೆಯಿಂದ ಬೆಳೆಸಬಹುದಾದ ಗಿಡವಾಗಿದೆ. ಈ ಸಸ್ಯವು ಫಾರ್ಮಾಲ್ಡಿಹೈಡ್, ಬೆಂಜೀನ್, ಸ್ಟೈಲೀನ್, ಟೊಲ್ಯೂನ್ ಮತ್ತು ನೈಟ್ರೋಜನ್ ಆಕ್ಷೆಡ್‌ಗಳಂತಹ ಹಾನಿಕಾರಕ ವಸ್ತುಗಳನ್ನು ಗಾಳಿಯಿಂದ ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ ಗಾಳಿಯನ್ನು ಶುದ್ದೀಕರಿಸುವ ಸಾಮರ್ಥ್ಯ ಹೊಂದಿದೆ.
(Rubber Plant): ಗಾಳಿಯನ್ನು ಶುದ್ದೀಕರಿಸಲು ಮತ್ತೊಂದು ಉತ್ತಮ ಸಸ್ಯವೆಂದರೆ ರಬ್ಬರ್ ಪ್ಲಾಂಟ್. ಇದು ಫಾರ್ಮಾಲ್ಡಿಹೈಡ್‌ನ ಪರಿಣಾಮಗಳನ್ನು ಎದುರಿಸುವ ಗುಣ ಹೊಂದಿದೆ. ಈ ಸಸ್ಯ ಬೆಳೆಯಲು ಸೂರ್ಯನ ಬೆಳಕು ಅಗತ್ಯವಾಗಿದೆ. ಸ್ವಲ್ಪ ಪ್ರಮಾಣದ ನೀರನ್ನು ಈ ಸಸ್ಯಕ್ಕೆ ಹಾಕಬೇಕು.
(Aloe Vera): ಇದನ್ನು ಮನೆಯೊಳಗೆ ಬೆಳೆಸುವ ಅತ್ಯಂತ ಸೂಕ್ತ ಸಸ್ಯವೆಂದು ಪರಿಗಣಿಸಲಾಗಿದೆ. ಇದು ಫಾರ್ಮಾಲ್ಡಿಹೈಡ್ ಮತ್ತು ಬೆಂಜೀನ್‌ನಂತಹ ಗಾಳಿಯಲ್ಲಿರುವ ವಿಷ ಪದಾರ್ಥಗಳನ್ನು ಪರಿಣಾಮಕಾರಿಯಾಗಿ ತೆಗೆದು ಹಾಕುತ್ತದೆ. ಈ ಸಸ್ಯ ಸೂರ್ಯನ ಬೆಳಕು ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ ಹಾಗೂ ಇದರ ನಿರ್ವಹಣೆಗೆ ಸ್ವಲ್ಪ ನೀರು ಸಾಕಾಗುತ್ತದೆ.
(Peace Lily): ಪೀಸ್ ಲಿಲಿಯು ಗಾಳಿ ಶುದ್ದೀಕರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಸಸ್ಯ ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್, ಬೆಂಜೀನ್, ಟ್ರೈಕ್ಲೋರೋಇಥಿಲೀನ್, ಸ್ಟೈಲೀನ್ ಮತ್ತು ಅಮೋನಿಯಾವನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಸೂರ್ಯನ ಬೆಳಕು ಹಾಗೂ ತೇವಾಂಶಯುಕ್ತ ಮಣ್ಣು ಈ ಸಸ್ಯಕ್ಕೆ ಅಗತ್ಯ.
໖໖ ៥ (Bamboo Palm): ಬಿದಿರು ತಾಳೆ ಮರವು ಫಾರ್ಮಾಲ್ಡಿಹೈಡ್, ಬೆಂಜೀನ್, ಟ್ರೈಕ್ಲೋರೋಎಥಿಲೀನ್ ಮತ್ತು ಸ್ಟೈಲೀನ್‌ನಂತಹ ಗಾಳಿಯಲ್ಲಿರುವ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಸೂರ್ಯನ ಬೆಳಕು ರಹಿತ ಮತ್ತು ನಿಯಮಿತ ನೀರು ಅಗತ್ಯವಿರುವುದರಿಂದ ಇದು ಮನೆಯೊಳಗೆ ಬೆಳೆಸಲು ಅತ್ಯುತ್ತಮ ಆಯ್ಕೆಯಾಗಿದೆ.
