ಉದಯವಾಹಿನಿ, ಬಿಗ್ ಬಾಸ್ ಸೀಸನ್ 12ರಲ್ಲಿ ಅಂತೂ ಅಶ್ವಿನಿ ಹಾಗೂ ಜಾಹ್ನವಿ ಅವರ ಮುಖವಾಡ ಬಯಲಾಗಿದೆ. ಸ್ವತಃ ಗಿಲ್ಲಿ ಅವರೇ ಇದು ಇವರಿಬ್ಬರದ್ದೂ ನಾಟಕ ಎಂದು ಹೇಳಿದ್ದರು. ಅದರಂತೆ ಅಶ್ವಿನಿ ಅವರೇ ಈಗ ಒಪ್ಪಿಕೊಂಡಿದ್ದಾರೆ. ಈ ವೀಕೆಂಡ್ ಕಿಚ್ಚನಿಂದ ಕ್ಲಾಸ್ ಪಕ್ಕಾ ಆದಂತಿದೆ. ಹಿಂದೊಮ್ಮೆ ಗೆಜ್ಜೆ ವಿಚಾರ ಬಯಲಾದ ನಂತರ, ಅಶ್ವಿನಿ ಹಾಗೂ ಜಾಹ್ನವಿ ನಡುವೆ ಜಗಳ ಶುರುವಾಗಿತ್ತು. ಆಗ ಸ್ವತಃ ಗಿಲ್ಲಿ ಅವರೇ ಇದು ಇವರಿಬ್ಬರದ್ದೂ ನಾಟಕ ಎಂದು ಹೇಳಿದ್ದರು.
ಮಧ್ಯರಾತ್ರಿ ಗೆಜ್ಜೆ ಸೌಂಡ್ ಮಾಡಿ, ಅದನ್ನ ರಕ್ಷಿತಾ ಶೆಟ್ಟಿ ಮೇಲೆ ಹಾಕೋಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಯತ್ನಿಸಿದರು. ಆದರೆ, ಜಾಹ್ನವಿ ದಿಂಬಿನಲ್ಲಿದ್ದ ಗೆಜ್ಜೆಯನ್ನ ತೆಗೆದು ತೋರಿಸಿ ಗಿಲ್ಲಿ ಬಳಿ ರಕ್ಷಿತಾ ಶೆಟ್ಟಿ ಸತ್ಯ ಹೇಳಿಬಿಟ್ಟರು. ಮನೆಯವರನ್ನು ಬಕ್ರಾ ಮಾಡೋಣ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ ಎಂದು ಗಿಲ್ಲಿ ಅವರು ಅಶ್ವಿನಿ ಜಾಹ್ನವಿ ಜಗಳ ಆದ ಬಳಿಕ ಹೇಳಿಕೊಂಡಿದ್ದರು. ಈಗ ಅದು ಸತ್ಯವಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿಕೊಂಡ ವಿಷಯವನ್ನು ಅಶ್ವಿನಿ ರಿವೀಲ್ ಮಾಡಿದ್ದಾರೆ.
