ಉದಯವಾಹಿನಿ, ರಾಜ್ಯದಲ್ಲಿ ಈಗಾಗಲೇ ಚಳಗಾಲ ಶುರುವಾಗಿದೆ. ದಿನದಿಂದ ದಿನಕ್ಕೆ ಚಳಿಯು ಏರಿಕೆಯಾಗುತ್ತದೆ. ಇದರ ಹಿನ್ನೆಲೆಯಲ್ಲಿ ಚರ್ಮ, ಕೈ, ಕಾಲುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದೆ. ಮನೆಯಲ್ಲಿಯೇ ಮಾಯಿಶ್ಚರೈಸರ್ ಕ್ರೀಮ್ ತಯಾರಿಸಬಹುದು. ಈ ಕ್ರೀಮ್ ಒಣ ಮತ್ತು ಬಿರುಕು ಬಿಟ್ಟ ಚರ್ಮವನ್ನು ನಿವಾರಿಸುವುದರ ಜೊತೆಗೆ ಚರ್ಮವನ್ನು ಹೆಚ್ಚು ಕಾಂತಿಯುತ ಹಾಗೂ ಮೃದುವಾಗಿಸುತ್ತದೆ.
ನವೆಂಬರ್ ತಿಂಗಳು ಆರಂಭವಾಗಿದ್ದು ಗಾಳಿಯು ಕ್ರಮೇಣ ತಣ್ಣಗಾಗುತ್ತಿದೆ. ಚಳಿಗಾಲದ ಹವಾಮಾನದ ಪರಿಣಾಮ ಚರ್ಮದ ಮೇಲೆ ಗೋಚರಿಸುತ್ತದೆ. ಶೀತ ಗಾಳಿಯಿಂದಾಗಿ ಕೈ ಮತ್ತು ಪಾದಗಳ ಮೇಲಿನ ಚರ್ಮವು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಮಂದ ಮತ್ತು ಒಣಗಿದಂತೆ ಕಂಡು ಬರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಯಿಶ್ಚರೈಸರ್‌ಗಳು ಹಾಗೂ ಬಾಡಿ ಲೋಷನ್‌ಗಳನ್ನು ಖರೀದಿಸುತ್ತಾರೆ. ಈ ರಾಸಾಯನಿಕ ಆಧಾರಿತ ಉತ್ಪನ್ನಗಳು ಎಲ್ಲರ ಚರ್ಮಕ್ಕೂ ಹೊಂದುವುದಿಲ್ಲ. ಇದೀಗ ಮನೆಯಲ್ಲಿಯೇ ಚಳಿಗಾಲದ ಕ್ರೀಮ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಅಲೋವೆರಾ- ಬಾದಾಮಿ ಎಣ್ಣೆ: ಮನೆಯಲ್ಲಿ ಬಾದಾಮಿ ಎಣ್ಣೆ ಹಾಗೂ ಅಲೋವೆರಾ ಜೆಲ್ ಸುಲಭವಾಗಿ ದೊರೆಯುತ್ತದೆ. ಅರ್ಧ ಕಪ್ ಅಲೋವೆರಾ ಜೆಲ್ ಹಾಗೂ ಕಾಲು ಕಪ್ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಇದೀಗ ಚಳಿಗಾಲದ ಕ್ರೀಮ್ ಸಿದ್ಧವಾಗುತ್ತದೆ. ಈ ಎರಡೂ ಪದಾರ್ಥಗಳು ಉರಿಯೂತ ನಿವಾರಕ ಮತ್ತು ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿದೆ. ಈ ಕ್ರೀಮ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ಶುಷ್ಕತೆಯನ್ನು ನಿವಾರಿಸುತ್ತದೆ.
ಅಲೋವೆರಾ ಜೆಲ್, ಗ್ಲಿಸರಿನ್, ರೋಸ್ ವಾಟರ್: ನೈಸರ್ಗಿಕವಾದ ಮಾಯಿಶ್ಚರೈಸರ್ ಕ್ರೀಮ್ ತಯಾರಿಸಲು ಅರ್ಧ ಕಪ್ ರೋಸ್ ವಾಟರ್, ಅರ್ಧ ಕಪ್ ಗ್ಲಿಸರಿನ್ ಹಾಗೂ ಅರ್ಧ ಕಪ್ ಅಲೋವೆರಾ ಜೆಲ್ ಸರಿಯಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಈ ಕ್ರೀಮ್​ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು. ಈ ಮಾಯಿಶ್ಚರೈಸರ್ ಕ್ರೀಮ್ ಚಳಿಗಾಲಕ್ಕೆ ತುಂಬಾ ಸೂಕ್ತವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.
ನಿಂಬೆ, ಜೇನುತುಪ್ಪ, ಗ್ಲಿಸರಿನ್: ಜೇನುತುಪ್ಪ, ನಿಂಬೆ ಹಾಗೂ ಗ್ಲಿಸರಿನ್ ಮಿಶ್ರಣ ಮಾಡಿ ಕ್ರೀಮ್ ತಯಾರಿಸುವುದು ಅತ್ಯಂತ ಸುಲಭವಾಗಿದೆ. 2 ಟೀಸ್ಪೂನ್ ಗ್ಲಿಸರಿನ್, 1 ಟೀಸ್ಪೂನ್ ಜೇನುತುಪ್ಪ, 1 ಟೀಸ್ಪೂನ್ ನಿಂಬೆ ಹಾಗೂ 2 ಟೀಸ್ಪೂನ್ ಗ್ರೀನ್ ಟೀ ಸಾರ ಮಿಶ್ರಣ ಮಾಡಿದರೆ ಚಳಿಗಾಲದ ಸಮಯದಲ್ಲಿ ಹೇಳಿ ಮಾಡಿಸಿದ ಕ್ರೀಮ್ ರಡೆಯಾಗುತ್ತದೆ. ಗ್ರೀನ್ ಟೀ ಸಾರವಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ಕ್ರೀಮ್​ ಅನ್ನು ಗ್ರೀನ್ ಟೀ ಇಲ್ಲದೆಯೇ ಸಿದ್ಧಪಡಿಸಬಹುದು. ಚಳಿಗಾಲದ ತಿಂಗಳಲ್ಲಿ ಪ್ರತಿದಿನ ಈ ನೈಸರ್ಗಿಕ ಕ್ರೀಮ್ ಬಳಸುವ ಮೂಲಕ ಚರ್ಮದ ಶುಷ್ಕತೆ ಹಾಗೂ ಬಿರುಕುಗಳನ್ನು ಬರದಂತೆ ತಡೆಯುತ್ತದೆ.

 

Leave a Reply

Your email address will not be published. Required fields are marked *

error: Content is protected !!