ಉದಯವಾಹಿನಿ, ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಜನರ ಆದೇಶ ಏನೇ ಬಂದರೂ ಸ್ವೀಕಾರ ಮಾಡ್ತೀವಿ. ಆದರೆ ಬಿಹಾರ ಚುನಾವಣೆಯಲ್ಲಿ ವೋಟ್ ಚೋರಿ ಆಗಿದೆ ಅಂತ ಸಚಿವ ಬೋಸರಾಜು ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರ ಅಭಿಪ್ರಾಯ ಏನೇ ಬಂದರು ನಾವು ಒಪ್ಪುತ್ತೇವೆ. ಆದರೆ ಬಿಜೆಪಿ ಅವರು ಇಡೀ ದೇಶದಲ್ಲಿ ವೋಟ್ ಚೋರಿ ಮಾಡ್ತಿದ್ದಾರೆ. ಬಿಹಾರದಲ್ಲೂ ಕೂಡ ಆಗಿದೆ. ಮೋದಿ, ಅಮಿತ್ ಶಾ ವೋಟ್ ಚೋರಿ ಮಾಡೋ ಕೆಲಸ ಮಾಡ್ತಿದ್ದಾರೆ. ಬಿಹಾರ ಫಲಿತಾಂಶ ಏನ್ ಬರುತ್ತೋ ನೋಡೋಣ ಎಂದಿದ್ದಾರೆ.
ಬಿಹಾರದಲ್ಲಿ ತೇಜಸ್ವಿ ಯಾದವ್ ಸಿಎಂ ಆಗಬೇಕು ಅಂತ ಜನರ ಅಭಿಪ್ರಾಯ ಇದೆ. ಇಡೀ ದೇಶದಲ್ಲಿ ವೋಟ್ ಚೋರಿ ಅಭಿಯಾನ ರಾಹುಲ್ ಗಾಂಧಿ ಮಾಡ್ತಿದ್ದಾರೆ. ಬಿಹಾರದಲ್ಲಿ ಫಲಿತಾಂಶ ಬಂದರೆ ಇದು ಸತ್ಯ ಅಂತ ಗೊತ್ತಾಗುತ್ತದೆ. ಈಗ ಚುನಾವಣಾ ಆಯೋಗ, ಇಡಿ, ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ. ಕಾಂಗ್ರೆಸ್ ಇದ್ದಾಗ ಇವೆಲ್ಲ ಸ್ವತಂತ್ರವಾಗಿ ಕೆಲಸ ಮಾಡ್ತಿದ್ದವು. ಯಾವುದೇ ಆರೋಪ ಇರಲಿಲ್ಲ. ಬಿಜೆಪಿ ಬಂದಾಗಿನಿಂದ ಬೇಕಾದರವನ್ನ ಹಾಕಿಕೊಂಡು ಕುತಂತ್ರ ರಾಜಕೀಯ ಮಾಡ್ತಿದ್ದಾರೆ. ವೋಟ್ ಚೋರಿ ಬಗ್ಗೆ ದಾಖಲಾತಿ ಸಿಕ್ಕಿದೆ. ಇದಕ್ಕೆ ಚುನಾವಣೆ ಆಯೋಗ, ಕೇಂದ್ರ ಸರ್ಕಾರ ಉತ್ತರ ಕೊಡಬೇಕು. ಆದರೆ ಇಬ್ಬರು ಉತ್ತರ ಕೊಡದೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ತಿದ್ದಾರೆ. ನಾವು ಜನರ ಮುಂದೆ ಇಡ್ತಾ ಇದ್ದೇವೆ. ಏನ್ ಆಗುತ್ತೋ ನೋಡೋಣ ಎಂದು ಹೇಳಿದ್ದಾರೆ.
