ಉದಯವಾಹಿನಿ, ಮಾಂಸಾಹಾರ ಸೇವನೆ ಮಾಡುವುದಿಲ್ಲ. ಅಂತಹವರಿಗಾಗಿ ಮಾಂಸಹಾರದ ಬದಲಿಗೆ ಸೋಯಾ ಚಂಕ್ಸ್ ಮಾಡಬಹುದು. ಈ ಕರಿಯು ರುಚಿಯಾಗಿರುತ್ತದೆ. ಈ ರೆಸಿಪಿಯನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು.ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳಿಂದ ಇದನ್ನು ಸುಲಭವಾಗಿ ತಯಾರಿಸಬಹುದು. ಈ ಕರಿಯನ್ನು ಅನ್ನ, ಚಪಾತಿ ಮತ್ತು ರೋಟಿ ಜೊತೆಗೆ ತಿನ್ನಬಹುದು. ತುಂಬಾ ರುಚಿಕರವಾದ ಸೋಯಾ ಚಂಕ್ಸ್ ಕರಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.ಸೋಯಾ ಚಂಕ್ಸ್ ಕರಿಗೆ ಬೇಕಾಗುವ ಪದಾರ್ಥಗಳು:
ಸೋಯಾ ಚಂಕ್ಸ್ – 1 ಕಪ್ ಕೊತ್ತಂಬರಿ ಸೊಪ್ಪು – 1 ಸಣ್ಣ ಕಟ್ ಪುದೀನಾ – 1 ಸಣ್ಣ ಕಟ್
ಹಸಿ ಮೆಣಸಿನಕಾಯಿ – 6 ಹುರಿದ ಶೇಂಗಾ – 1 ಟೀಸ್ಪೂನ್ ದಾಲ್ಚಿನ್ನಿ – 1 ಇಂಚು ತುಂಡು
ಏಲಕ್ಕಿ – 3 ಲವಂಗ – 4 ಧನಿಯಾ – 1 ಟೀಸ್ಪೂನ್ ಟೊಮೆಟೊ – 2 ಎಣ್ಣೆ – 2 ಟೀಸ್ಪೂನ್
ಈರುಳ್ಳಿ – 1 ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಗರಂ ಮಸಾಲ – 1 ಟೀಸ್ಪೂನ್
ಕರಿಬೇವು – 1 ಚಿಗುರು
ಸೋಯಾ ಚಂಕ್ಸ್ ಕರಿ
ಮಸಾಲೆ ಪದಾರ್ಥಗಳು (Getty Iamges)
ಸೋಯಾ ಚಂಕ್ಸ್ ಕರಿ ತಯಾರಿಕೆಯ ವಿಧಾನ:
ಸೋಯಾ ಚಂಕ್ಸ್ ಅನ್ನು 10 ನಿಮಿಷಗಳ ಕಾಲ ನೆನೆಸಿಡಬೇಕು. ಮಿಕ್ಸರ್ ಜಾರ್ನಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ, ಹಸಿಮೆಣಸಿನಕಾಯಿ, ಹುರಿದ ಶೇಂಗಾ ದಾಲ್ಚಿನ್ನಿ, ಏಲಕ್ಕಿ, ಲವಂಗ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ.
ಬಳಿಕ ಟೊಮೆಟೊ ತುಂಡುಗಳನ್ನು ಸೇರಿಸಿ ರುಬ್ಬಿಕೊಳ್ಳಿ.
