ಉದಯವಾಹಿನಿ, ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಅಂತ ವಿಪಕ್ಷ ನಾಯಕ ಅಶೋಕ್ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ದೆಹಲಿ ಸ್ಪೋಟ ಮತ್ತು ಅಮಿತ್ ಶಾ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಬಾಂಬ್ ಸ್ಪೋಟ ವಿಚಾರದಲ್ಲಿ ಮೋದಿ ಅವರು ಸಭೆ ಮಾಡಿದ್ದಾರೆ. ಯಾರೇ ಉಗ್ರರು ಇದ್ದರೂ ಹೆಡೆಮುರಿ ಕಟ್ಟೋಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಯಾರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ತಿದ್ದಾರೆ ಅಂತ ತಿಳಿಸಿದರು.
ರಾಜ್ಯದಲ್ಲಿ ಪರಪ್ಪನ ಅಗ್ರಹಾರದ ಮೊಬೈಲ್, ಇಂಟರ್ ನೆಟ್ ಫೋನ್ ಎಲ್ಲವೂ ಸಿಕ್ಕಿದೆ. ಗೃಹ ಸಚಿವರು ಈ ವಿಡಿಯೋ ಲೀಕ್ ಮಾಡಿದವರು ಯಾರು ಅಂತ ಕಂಡು ಹಿಡಿಯೋಕೆ ಸ್ಪೆಷಲ್ ತನಿಖೆ ( ಮಾಡಿದ್ತಾ ಇದ್ದಾರೆ. ಕೇಂದ್ರ ಸರ್ಕಾರ ದೇಶ ವಿರೋಧ ಪೋಸ್ಟರ್ ಅಂಟಿಸಿದ ಕಾರಣದಿಂದ ಸ್ಪೋಟದ ವಸ್ತು ಸೀಜ್ ಮಾಡಿದೆ. ರಾಜ್ಯ ಸರ್ಕಾರ ಕೇಂದ್ರದ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪಾಕಿಸ್ತಾನ ಜಿಂದಾಬಾದ್ ಕೂಗೋರು, ಕುಕ್ಕರ್ ಬ್ಲ್ಯಾಸ್ಟ್ ಮಾಡಿರೋರು ಬಗ್ಗೆ ಕ್ರಮವಹಿಸಬೇಕು. ಡಿಜೆ-ಕೆಜೆ ಹಳ್ಳಿ ಕೇಸ್ ವಾಸಪ್ ತೆಗೆದರು. ಇನ್ಮುಂದೆ ನೋಡಿಕೊಂಡು ಕೇಸ್ ತೆಗೆಯಲಿ. ಈ ಸರ್ಕಾರ ಎರಡು ವರ್ಷ ಇರುತ್ತದೆ. ಅಮೇಲೆ ಬೇರೆ ಸರ್ಕಾರ ಬರುತ್ತದೆ. ಇವೆಲ್ಲ ಶಾಶ್ವತ ಅಲ್ಲ ಅಂತ ಕಿಡಿಕಾರಿದರು.
