ಉದಯವಾಹಿನಿ, ಹೈದರಾಬಾದ್ : ಹೈದರಾಬಾದ್​ ಬಳಿಯ ಅಂಬರ್‌ಪೇಟೆ ಪೊಲೀಸರು ಬಹು ವಾಹನ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 19 ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಂಗ್ ಅನ್ನು ರಚಿಸಿ ಮೊಪೆಡ್‌ಗಳನ್ನು ಕದಿಯುತ್ತಿದ್ದ ಮೂವರನ್ನು ಅಂಬರ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 7ರಂದು ಪ್ರೇಮನಗರದಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಟಿವಿಎಸ್ ಎಕ್ಸ್‌ಎಲ್ ಬೈಕ್ ಕಳುವಾಗಿದೆ ಎಂದು ದೂರು ದಾಖಲಿಸಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ದರೋಡೆಕೋರರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ಶ್ರವಣ್ (28) ಚತ್ರಿನಕ ಮೂಲದವನು. ಈತ ತರಕಾರಿ ವ್ಯಾಪಾರಿ. ಈತನ ಜೊತೆ ಬೀಬಿನಗರ ಮತ್ತು ಮೆಡ್ಚಲ್ ಪ್ರದೇಶಗಳ ಇಬ್ಬರು ಕಾರ್ಮಿಕರಾದ ಕಲಿಯ ರಾಜು (38) ಮತ್ತು ಶಕತ್ ಮುಖೇಂದರ್ (40) ಸೇರಿಕೊಂಡಿದ್ದರು. ಟಿವಿಎಸ್ ಎಕ್ಸ್‌ಎಲ್ ಮೊಪೆಡ್‌ಗಳನ್ನು ಕದ್ದರೆ ಮಾಲೀಕರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಾವಿಸಿ ಅವರು ಕದಿಯಲು ಪ್ರಾರಂಭಿಸಿದ್ದರು.

Leave a Reply

Your email address will not be published. Required fields are marked *

error: Content is protected !!