ಉದಯವಾಹಿನಿ, ಮಹಾರಾಷ್ಟ್ರ : ದೊಡ್ಡವರು ಮಕ್ಕಳಿಗೆ ಆದರ್ಶವಾಗಬೇಕು ಹೊರತು, ಅವರಿಗೆ ತಪ್ಪು ದಾರಿಗೆ ತೋರಿಸುವ ವ್ಯಕ್ತಿಗಳು ಆಗಬಾರದು. ಇಲ್ಲೊಂದು ವೈರಲ್​​ ಆಗಿರುವ ವಿಡಿಯೋ ನೋಡಿದ್ರೆ ಎಲ್ಲವೂ ಅರ್ಥವಾಗುತ್ತದೆ. ದೇಶದಲ್ಲಿ ವಾಹನ ಓಡಿಸಲು ಒಂದಿಷ್ಟು ಕಾನೂನು ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಅದರಲ್ಲಿ ಒಂದು ವಾಹನ ಓಡಿಸಲು ವಯಸ್ಸಿನ ಮಿತಿ, ಆದರೆ ಇಲ್ಲಿ ವೈರಲ್​​ ಆಗಿರುವ ವಿಡಿಯೋದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಆಟೋ ಓಡಿಸಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ನೆಟ್ಟಿಗರು ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟೋದ ಹಿಂದಿನ ಸೀಟಿನಲ್ಲಿ ಒಂದಿಷ್ಟು ವಿದ್ಯಾರ್ಥಿನಿಯರು ಇದ್ದರೆ. ಬಾಲಕಿ ಡ್ರೈವರ್​​​ ಸೀಟಿನಲ್ಲಿ ಕುಳಿತುಕೊಂಡು ರಿಕ್ಷಾ ಓಡಿಸುತ್ತಿದ್ದಾಳೆ. ಆಕೆಯ ಪಕ್ಕಾದಲ್ಲೇ ಆಟೋ ಡ್ರೈವರ್​​ ಇರುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದು. ಈ ಘಟನೆ ಮಹಾರಾಷ್ಟ್ರದ ಖೋಪೋಲಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇದೀಗ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!