ಉದಯವಾಹಿನಿ, ಮದುವೆ ಮಂಟಪದಲ್ಲಿದ್ದ ಮದುಮಗನಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆವೊಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಕಿಡಿಗೇಡಿಗಳು ಮಂಟಪದಲ್ಲಿದ್ದ ಮದುವೆ ಗಂಡಿಗೆ ಚಾಕು ಇರಿದು ಪರಾರಿಯಾಗಿರುವ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇವಲ ದೃಶ್ಯವನ್ನ ಸೆರೆ ಹಿಡಿದಿದ್ದು ಮಾತ್ರವಲ್ಲದೇ ದುಷ್ಕರ್ಮಿಗಳನ್ನ ಸುಮಾರು ಎರಡು ಕಿಲೋ ಮೀಟರ್ ದೂರ ಚೇಸ್ ಮಾಡುವ ಮೂಲಕ ಡ್ರೋಣ್ ಕ್ಯಾಮೆರಾ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ.
ಮದುವೆ ಮನೆಯಲ್ಲಿ ಎಲ್ಲರೂ ಸಂಭ್ರಮ, ಸಡಗರದಿಂದ ಪಾಲ್ಗೊಂಡಿದ್ದರು, ವೇಧಿಕೆಯ ಮೇಲಿದ್ದ ನವಜೋಡಿಗಳಿಗೆ ಸಂಬಂಧಿಕರು ಶುಭಾಶಯ ಕೋರುತ್ತಿದ್ದರು, ಆದರೆ ಇದೇ ವೇಳೆ ವೇದಿಕೆಗೆ ನುಗ್ಗಿದ ಆಗುಂತಕರು ಮದುಮಗನಿಗೆ ಮೂರು ಬಾರಿ ಚಾಕುವಿನಿಂದು ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದುಷ್ಕರ್ಮಿಗಳನ್ನ ಚೇಸ್ ಮಾಡಿದ ಡ್ರೋಣ್!: ಮದುಮಗನಿಗೆ ಚಾಕು ಇರಿದ ದುಷ್ಕರ್ಮಿಯನ್ನ ರಘೋ ಜಿತೇಂದ್ರ ಭಕ್ಷಿ ಎಂದು ಗುರುತಿಸಲಾಗಿದೆ. ಭಕ್ಷಿಗೆ ಈ ಕೃತ್ಯಕ್ಕೆ ಮತ್ತೊಬ್ಬ ಆರೋಪಿ ಕೂಡ ಸಾಥ್ ಕೊಟ್ಟಿದ್ದಾನೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ದುಷ್ಕರ್ಮಿಗಳು ಮದುವೆ ಮಂಟಪದ ಹೊರಗೆ ಬೈಕ್ ನಿಲ್ಲಿಸಿ ಬಂದಿದ್ದರು, ಮದುಮಗನಿಗೆ ಚಾಕುವಿನಿಂದ ಇರಿದ ಬಳಿಕ ಆರೋಪಿಗಳು ತಕ್ಷಣವೇ ಗೇಟ್ ಬಳಿ ಓಡಿ ಹೋಗಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಆರೋಪಿಗಳು ಬೈಕ್ನಲ್ಲಿ ಎಸ್ಕೇಪ್ ಆಗುವ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳು ಎಸ್ಕೇಪ್ ಆಗ್ತಿದ್ದಂತೆ ಡ್ರೋಣ್ ಕ್ಯಾಮೆರಾ ಆಪರೇಟರ್, ಆರೋಪಿಗಳನ್ನ ಡ್ರೋಣ್ನಲ್ಲಿ ಸುಮಾರು ಎರಡು ಕಿಲೋ ಮೀಟರ್ ದೂರದಷ್ಟು ಫಾಲೋ ಮಾಡಿದೆ.
