ಉದಯವಾಹಿನಿ, ವಾಷಿಂಗ್ಟನ್: ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ನಾಪತ್ತೆಯಾಗಿರುವ ದಾಖಲೆಗಳಲ್ಲಿದ್ದ ಫೋಟೋದಲ್ಲಿ ಡೊನಾಲ್ಡ್ ಟ್ರಂಪ್, ಜೆಫ್ರಿ ಎಪ್ಸ್ಟೀನ್, ಮೆಲಾನಿಯಾ ಟ್ರಂಪ್ ಹಾಗೂ ಎಪ್ಸ್ಟೀನ್‌ನ ದೀರ್ಘಕಾಲದ ಸಹಚರಿ ಘಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆಗಿರುವುದು ಕಂಡುಬಂದಿತ್ತು.
ಈ ದಾಖಲೆಗಳನ್ನೇಕೆ ತೆಗೆದುಹಾಕಲಾಗಿದೆ ಅಥವಾ ಇದು ಉದ್ದೇಶಪೂರ್ವಕ ಕ್ರಮವೇ ಎಂಬುದರ ಕುರಿತು ನ್ಯಾಯ ಇಲಾಖೆ ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ, ನ್ಯಾಯ ಇಲಾಖೆಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ಮೇಲ್ವಿಚಾರಣಾ ಸಮಿತಿಯ ಡೆಮಾಕ್ರ್ಯಾಟ್ ಸದಸ್ಯರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ, ಟ್ರಂಪ್ ಫೋಟೋ ಇರುವ ದಾಖಲೆ ನಾಪತ್ತೆಯಾದ ವಿಚಾರವನ್ನು ಉಲ್ಲೇಖಿಸಿ, “ಇನ್ನೇನು ಮುಚ್ಚಿಡಲಾಗುತ್ತಿದೆ? ಅಮೆರಿಕದ ಜನತೆಗೆ ಪಾರದರ್ಶಕತೆ ಬೇಕು ಎಂದು ಆಗ್ರಹಿಸಿದ್ದಾರೆ. ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಕೋಟ್ಯಧಿಪತಿ ಮತ್ತು ಲೈಂಗಿಕ ಅಪರಾಧಿಯ ಸುತ್ತ ಹೆಣೆದುಕೊಂಡಿರುವ ಇತ್ತೀಚೆಗೆ ಜಗತ್ತಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಬಹಿರಂಗಗೊಂಡಿರುವ ಈ ಸಾವಿರಾರು ಪುಟಗಳ ದಾಖಲೆಗಳು ಕೇವಲ ಲೈಂಗಿಕ ಹಗರಣವನ್ನಷ್ಟೇ ಅಲ್ಲ, ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಕರಾಳ ಮುಖವನ್ನೂ ಅನಾವರಣಗೊಳಿಸಿವೆ.
