ಉದಯವಾಹಿನಿ, ಕೋಲ್ಕತ್ತಾ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ವನ್ನು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ಎಂದು ಬದಲಾಯಿಸಿದರೆ ಇದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳ ಸರ್ಕಾರವು ಕರ್ಮಶ್ರೀ ) ಯೋಜನೆಯ ಹೆಸರನ್ನು ಮಹಾತ್ಮಶ್ರೀ ಎಂದು ಬದಲಾಯಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತವು ಶನಿವಾರ ಅಧಿಕೃತವಾಗಿ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ರಾಜ್ಯದ 100 ದಿನಗಳ ಉದ್ಯೋಗ ಯೋಜನೆಯ ಹೆಸರನ್ನು ಮಹಾತ್ಮಶ್ರೀ ಎಂದು ಮರುನಾಮಕರಣ ಮಾಡಿದೆ.ಈ ಕುರಿತು ಮಾಹಿತಿ ನೀಡಿರುವ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು, ಕರ್ಮಶ್ರೀ ಯೋಜನೆಗೆ ಮರುನಾಮಕರಣ ಮಾಡಿರುವುದರ ಹಿಂದೆ ಮಹಾತ್ಮ ಗಾಂಧಿಯವರ ಪರಂಪರೆಯನ್ನು ಕಾಪಾಡುವ ಉದ್ದೇಶವಿದೆ. ನಮ್ಮ ರಾಜ್ಯದ ಕಾರ್ಯಕ್ರಮವು ಸಾರ್ವಜನಿಕ ಕಲ್ಯಾಣದ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!