ಉದಯವಾಹಿನಿ, ಉಗ್ರರನ್ನು ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿಸುವ ಪಾಕಿಸ್ತಾನ ರಾಜಕೀಯ ನಾಯಕರ ಹುಚ್ಚಾಟದ ಪರಿಣಾಮ ಇದೀಗ ಪಾಪಿ ಪಾಕ್ ಉಗ್ರರ ಕೂಪವಾಗಿದೆ. ಅಕ್ಕಪಕ್ಕದ ದೇಶಗಳಿಗೆ ಇದೇ ಪಾಪಿ ಉಗ್ರರು ದೊಡ್ಡ ಕಂಟಕವಾಗಿದ್ದಾರೆ. ಹೀಗಿದ್ದರೂ, ಪಾಕಿಸ್ತಾನದ ರಾಜಕೀಯ ನಾಯಕರು ಮಾತ್ರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮತ್ತೆ ಭೀಕರ ಸ್ಫೋಟಕ್ಕೆ ಸಾಕ್ಷಿಯಾಗಿತ್ತು. ಇಸ್ಲಾಮಾಬಾದ್ ಅಟ್ಯಾಕ್ ದೊಡ್ಡ ಕಂಟಕ ತಂದೊಡ್ಡಿದ್ದು, ಪಾಕ್ ಜನರಲ್ಲೇ ಭಯ ಮೂಡಿದೆ. ಇಷ್ಟೆಲ್ಲಾ ಘಟನೆಗಳ ನಡುವೆ ಇಸ್ಲಾಮಾಬಾದ್ ಘಟನೆಯ ಹೊಣೆ ಹೊತ್ತುಕೊಂಡ ತಾಲಿಬಾನ್ ಮತ್ತೊಂದು ಎಚ್ಚರಿಕೆ ನೀಡಿದೆ. ಹಾಗೂ ಪಾಪಿ ಪಾಕಿಸ್ತಾನ ಪ್ರಧಾನಿ ಭಾರತದ ವಿರುದ್ಧ ನೀಡಿದ್ದ ಹೇಳಿಕೆಗೆ ಸರಿಯಾಗೇ ಉತ್ತರ ಸಿಕ್ಕಂತಾಗಿದೆ.
ಪಾಕಿಸ್ತಾನದ ತಾಲಿಬಾನ್ ಇದೀಗ ಇಸ್ಲಾಮಾಬಾದ್ ಡೆಡ್ಲಿ ಬ್ಲಾಸ್ಟ್ ಹೊಣೆಯನ್ನ ಹೊತ್ತುಕೊಂಡಿದೆ. ಡೆಡ್ಲಿ ಬ್ಲಾಸ್ಟ್‌ನಲ್ಲಿ 12 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಪಾಕಿಸ್ತಾನದ ಬೇರೆ ಬೇರೆ ಭಾಗದಲ್ಲೂ ದಾಳಿ ನಡೆಯುವ ಆತಂಕ ಮೂಡಿದೆ. ಇದೇ ಸಮಯಕ್ಕೆ ಸರಿಯಾಗಿ ದಿಢೀರ್ ಪಾಕಿಸ್ತಾನದ ತಾಲಿಬಾನ್ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಇನ್ನು ಮತ್ತೊಂದು ಕಡೆ ಪಾಕಿಸ್ತಾನದ ಪ್ರಧಾನಿ ಹುಚ್ಚು ಹಿಡಿದವರಂತೆ ಇಸ್ಲಾಮಾಬಾದ್ ಘಟನೆಗೆ ನಮ್ಮ ಭಾರತವನ್ನು ಹೊಣೆ ಮಾಡಲು ಯತ್ನಿಸಿದ್ದರು. ಆದರೆ ಇದೀಗ ಪಾಕಿಸ್ತಾನದ ನಿಜ ಬಣ್ಣ ಬಯಲು ಆಗಿದೆ.
