ಉದಯವಾಹಿನಿ, ರಷ್ಯಾ & ಉಕ್ರೇನ್ ನಡುವೆ ಯುದ್ದದ ಬೆಂಕಿ ಆರುತ್ತಿಲ್ಲ, ಬದಲಾಗಿ ಇನ್ನಷ್ಟು ಜಾಗಕ್ಕೆ ಹಬ್ಬುತ್ತಾ ಭಯ ಸೃಷ್ಟಿ ಮಾಡಿದೆ. ರಷ್ಯಾ & ಉಕ್ರೇನ್ ಯುದ್ಧಕ್ಕೆ ಇನ್ನೇನು 4 ತಿಂಗಳಲ್ಲಿ 4 ವರ್ಷ ತುಂಬಿ ಹೋಗಲಿದೆ. ಹೀಗಿದ್ದರೂ ಯುದ್ಧ ನಿಲ್ಲದೆ ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡುತ್ತಾ ಇದ್ದಾರೆ.
ಮತ್ತೊಂದು ಕಡೆ ದಿಢೀರ್ ರಷ್ಯಾ ನಡೆಸಿರುವ ಡೋನ್ ದಾಳಿಯಲ್ಲಿ ಜನ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಸಾಮಾನ್ಯ ಜನರೇ ದಾಳಿಯಲ್ಲಿ ಬಲಿ ಆಗುತ್ತಿರುವ & ಈ ರೀತಿಯಾಗಿ ಪದೇ ಪದೇ ಎರಡೂ ಕಡೆಯಿಂದ ಡೋನ್ ಹಾಗೂ ಕ್ಷಿಪಣಿ ದಾಳಿ ನಡೆಯುತ್ತಾ ಇರುವುದು ಚಿಂತೆ ಹೆಚ್ಚಿಸಿದೆ.
ರಷ್ಯಾ ಮಿಲಿಟರಿ ಪೂರ್ವ ಉಕ್ರೇನ್ ನಗರ ಕ್ರಾಮಾಟೋರ್ಸ್ಟ್ ಮೇಲೆ ಡೆಡ್ಲಿ ಡೋನ್ ದಾಳಿ ನಡೆಸಿ ನಾಗರಿಕನ ಹತ್ಯೆಗೆ ಕಾರಣವಾಗಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಈ ಘಟನೆ ನಂತರ ಅತ್ತ ಉಕ್ರೇನ್ ಕೂಡ ಮರುದಾಳಿಗೆ ಸಿದ್ಧವಾಗುತ್ತಿದೆ. ಹಾಗೇ ಈ ಘಟನೆಯಲ್ಲಿ ಖಾರ್ಕಿವ್ ಪ್ರದೇಶದಲ್ಲಿ ಮೂವರು ಗಾಯಗೊಂಡಿರುವ ಆರೋಪ ಕೂಡ ಕೇಳಿಬಂದಿದೆ. ಇದು ಪಾಶ್ಚಿಮಾತ್ಯ ದೇಶಗಳಿಗೆ, ಅದರಲ್ಲೂ ಅಮೆರಿಕಗೆ ಮತ್ತೊಂದು ಅಸ್ತ್ರ ಕೊಟ್ಟಂತೆ ಆಗಿದೆ. ಹಾಗೇ ಇನ್ನೊಂದು ಕಡೆ ರಷ್ಯಾ ದೇಶದ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಕೂಡ ಅಟ್ಯಾಕ್ ಮಾಡೋಕೆ ಮುಂದೆ ನುಗ್ಗುತ್ತಿದೆ.
ಪ್ರಪಂಚದಲ್ಲಿ ಇದೀಗ ಎಲ್ಲೆಲ್ಲೂ ಬರೀ ಯುದ್ಧ.. ಹಿಂಸೆ.. ಸಾವಿನ ಸುದ್ದಿಯೇ ಕೇಳಿಬರುತ್ತಿದೆ. 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಜೋರಾಗಿದೆ.. ಎರಡೂ ದೇಶಗಳ ನಡುವೆ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಬೇಕು ಅಂತಾ ಭಾರಿ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಲೇ ಇವೆ. ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಈ ವಿಚಾರವಾಗಿ ನೇರವಾಗಿ ವಾರ್ನಿಂಗ್ ಕೊಟ್ಟಿದ್ದರೂ ಯುದ್ದ ಮಾತ್ರ ನಿಲ್ಲುತ್ತಿಲ್ಲ. ಬದಲಾಗಿ ಮತ್ತಷ್ಟು ಜಾಸ್ತಿ ಆಗುತ್ತಿದೆ.
