ಉದಯವಾಹಿನಿ, ವಾಷಿಂಗ್ಟನ್: ಇತಿಹಾಸದಲ್ಲೇ ಗರಿಷ್ಠವಾದ 41 ದಿನಗಳ ಕಾಲ ಸ್ಥಗಿತವಾಗಿದ್ದ ಅಮೆರಿಕ ಸರ್ಕಾರವನ್ನು ಪುನರ್ ಸ್ಥಾಪಿಸಲು ಅಮೆರಿಕದ ಕಾಂಗ್ರೆಸ್‌ನ ಮೇಲ್ಮನೆ ಸೆನೆಟ್ ಒಪ್ಪಿಗೆ ನೀಡಿದೆ. ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿನ್ಸ್ ಒಪ್ಪಿಗೆ ನೀಡುವುದೊಂದು ಬಾಕಿಯಿದ್ದು, ಅದು ಒಪ್ಪಿಗೆ ನೀಡಿದರೆ ಶೀಘ್ರದಲ್ಲಿ ಸರ್ಕಾರ ಮತ್ತೆ ಪುನರ್ ಸ್ಥಾಪನೆಯಾಗಿ ಕೆಲಸ ನಿರ್ವಹಿಸಲಿದೆ.
ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನಾ ಕೂಡ ‘ನಾವು ನಮ್ಮ ದೇಶವನ್ನು ಬಹಳ ಬೇಗನೆ ತೆರೆಯಲಿದ್ದೇವೆ’ ಎಂದು ಹೇಳುವ ಮೂಲಕ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ.
ಇದರಿಂದ ಜನವರಿ ಅಂತ್ಯದವರೆಗೂ ಎಲ್ಲಾ ಬಿಲ್ ಗಳಿಗೂ ಪಾವತಿ ಮಾಡಲು ಬೇಕಾದ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಕಳೆದ ಸೆಪ್ಟೆಂಬರ್ ಮಾಹೆಯ ಮಧ್ಯದಲ್ಲಿ ಅಮೆರಿಕ ಸರ್ಕಾರ ಸ್ಥಗಿತಗೊಂಡಿತ್ತು.
