ಉದಯವಾಹಿನಿ, ಇಸ್ಲಮಾಬಾದ್‌: 12 ಜನರ ಸಾವಿಗೆ ಕಾರಣವಾದ ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ
ಪ್ರಧಾನಿ ಶೆಹಬಾಜ್ ಷರೀಫ್ ಭಾರತವೇ ಕಾರಣವೆಂದು ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನದ ಗಡಿಯ ಬಳಿಯ ವಾನಾದ ಕ್ಯಾಡೆಟ್ ಕಾಲೇಜಿನ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನ ಸರ್ಕಾರದ ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ ಪ್ರಕಾರ, ಈ ಅವಳಿ ದಾಳಿಗಳಿಗೆ ಭಾರತ ಪ್ರಾಯೋಜಿತ ಭಯೋತ್ಪಾದಕ ಪ್ರಾಕ್ಸಿಗಳು ಕಾರಣ ಎಂದು ಪಾಕ್ ಪ್ರಧಾನಿ ಆರೋಪಿಸಿದ್ದಾರೆ. “ಈ ದಾಳಿಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ಮುಂದುವರಿಕೆಯಾಗಿದೆ” ಎಂದು ಅವರು ಮಾಧ್ಯಮಗಳೆದುರು ಹೇಳಿದ್ದಾರೆ. ಆದರೆ, ಈ ಹುಸಿ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಅವರು ನೀಡಿಲ್ಲ.
ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯ ರಫ್ತುದಾರನಾಗಿದೆ. ತಾನೇ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ. ಆ ಉಗ್ರರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಅದಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡುವುದು ಪಾಕಿಸ್ತಾನಕ್ಕೆ ಹೊಸತೇನಲ್ಲ. ಇತ್ತ ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಹಿಂದೆ ಜಮ್ಮು ಕಾಶ್ಮೀರದ ಗಡಿಯ ಭಯೋತ್ಪಾದಕರ ನಂಟಿನ ಬಗ್ಗೆ ತನಿಖಾಧಿಕಾರಿಗಳಿಗೆ ಕೆಲವು ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಎರಡೂ ದೇಶಗಳಲ್ಲಿ ಒಂದೇ ದಿನ ಕಾರು ಬಾಂಬ್ ಸ್ಫೋಟ ಸಂಭವಿಸಿರುವುದು ಕಾಕತಾಳೀಯ.

Leave a Reply

Your email address will not be published. Required fields are marked *

error: Content is protected !!