ಉದಯವಾಹಿನಿ, ಆಧುನಿಕ ಜೀವನಶೈಲಿಯ ಕಾರಣದಿಂದ ಬಹಳಷ್ಟು ಜನ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜತೆಗೆ ಹೆಚ್ಚಾದ ಕೊಬ್ಬು ಕರಗಿಸಲು ಆಗದೆ ಅದರಿಂದ ಇನ್ನೂ ಹೆಚ್ಚು ಅನಾರೋಗ್ಯಗಳಿಗೆ ಒಳಗಾಗುತ್ತಿದ್ದಾರೆ. ಆದರೆ ದೇಹದಲ್ಲಿನ ಬೇಡವಾದ ಕೊಬ್ಬು ಕರಗಿಸಲು ಅರಶಿನ ನೀರು ರಾಮಬಾಣ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅರಿಶಿನ ನೀರು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಹೊರ ಬರಬಹುದಾಗಿದ್ದು, ಪ್ರತಿದಿನ ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಅರಿಶಿನದ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಗೊಂಡು ಜೀರ್ಣ ಕ್ರಿಯೆ ಕ್ರಿಯೆ ಸುಧಾರಿಸುತ್ತದೆ.
ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಜೀರಿಗೆ ನೀರು ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡುವುದಿಲ್ಲ. ತೂಕ ಇಳಿಸುವ ಪ್ರಯತ್ನದಲ್ಲಿರುವಾಗ ಅರಿಶಿನ ನೀರು ಸೇವನೆ ಅತ್ಯಂತ ಸೂಕ್ತ. ಒಂದು ಟೇಬಲ್ ಚಮಚ ಅರಿಶಿನದಲ್ಲಿ ಕೇವಲ ಕ್ಯಾಲೋರಿ ಶಕ್ತಿ ಇರುವುದರಿಂದ ಇದನ್ನು ಕರಗಿಸಲು ಹೆಚ್ಚುವರಿ ವ್ಯಾಯಾಮದ ಅವಶ್ಯಕತೆ ಇರುವುದಿಲ್ಲ. ಅಧ್ಯಯನಗಳ ಪ್ರಕಾರ ಅರಿಶಿನ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಅಂಶ ಒಳಗೊಂಡಿದೆ. ವಿಟಮಿನ್ ಎ, ಸಿಗಳಿಂದ ಸಮೃದ್ಧವಾಗಿರುವ ಅರಿಶಿನದಲ್ಲಿ ದೇಹಕ್ಕೆ ಅಗತ್ಯವಾದ ಮ್ಯಾಂಗನೀಸ್ ಮತ್ತು ತಾಮ್ರದ ಪೋಷಕಾಂಶಗಳೂ ಇವೆ. ಅರಿಶಿನ ದೇಹದಲ್ಲಿ ಬೇಡವಾದ ಆಕ್ಸಿಜನ್ ರ್‍ಯಾಡಿಕಲ್ ಅಂಶಗಳನ್ನು ನಿವಾರಿಸುತ್ತವೆ.
ದೇಹದಲ್ಲಿನ ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ವ್ಯಕ್ತಿ ಆರೋಗ್ಯದಿಂದಿರಲು ಸಾಧ್ಯ. ಅರಿಶಿನ ನೀರು ಸೇವನೆಯಿಂದ ಕರುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಹಜವಾಗಿಯೇ ಸುಧಾರಿಸುತ್ತದೆ. ಉತ್ತಮ ಜೀರ್ಣಕ್ರಿಯೆಯಿಂದ ಚಯಾಪಚಯ ಕ್ರಿಯೆ ಸುಸೂತ್ರವಾಗಿ ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಇದು ಸಹಕಾರಿಯಾಗುತ್ತದೆ. ಜೀರ್ಣಕ್ರಿಯೆಯ ಎಂಝೈಮ್‌ಗಳನ್ನು ಉತ್ತೇಜಿಸುವ ಗುಣ ಹೊಂದಿರುವ ಅರಿಶಿನ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.
