ಉದಯವಾಹಿನಿ, ಬೆಳಗಾವಿ: ಇಲ್ಲಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು (Black Buck) ದಾರುಣವಾಗಿ ಸಾವನ್ನಪ್ಪಿವೆ. ಈ ಬಗ್ಗೆ ಪಶುವೈದ್ಯ ನಾಗೇಶ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಡಯಗ್ನೋಸ್ ಪ್ರಕಾರ ಬ್ಯಾಕ್ಟೀರಿಯಾ, ವೈರಲ್ ಸೋಂಕು ಆಗಿದೆ ಆದರೂ ವರದಿ ಬಂದ ನಂತರ ನಿಖರವಾದ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.ನಮ್ಮ ಮೃಗಾಲಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೃಷ್ಣ ಮೃಗಗಳ ಸಾವು ಸಂಭವಿಸುತ್ತಿದೆ. ಅವಶ್ಯಕ ಔಷಧಿಯನ್ನು ನೀಡಲಾಗುತ್ತಿದೆ. ಅದರೆ ಆ ಪ್ರಾಣಿಗಳಿಗೆ ಬಂದ ರೋಗದ ಕುರಿತು ಅಧ್ಯಯನ ಮಾಡಲು ಶವಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿದ್ದೇವೆ. ಸ್ಯಾಂಪಲ್‌ನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರುವ ಲ್ಯಾಬ್‌ಗೆ ಕಳುಹಿಸಿದ್ದೇವೆ. ಈ ಬಗ್ಗೆ ವರದಿ ಬರಬೇಕಾಗಿದೆ ಎಂದಿದ್ದಾರೆ
