ಉದಯವಾಹಿನಿ, ಲಾಹೋರ್ : ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದ ಬಳಿಕ ಇದೀಗ ಭಾರತದ ವಿರುದ್ಧ ಜೈಶ್-ಎ-ಮೊಹಮ್ಮದ್‌ನ (Jaish-e-Mohammed) ಮಹಿಳಾ ಸಂಘಟನೆ ಫಿದಾಯೀನ್ ದಾಳಿಗೆ ಸಿದ್ಧವಾಗುತ್ತಿದೆ ಹಾಗೂ ಅದಕ್ಕಾಗಿ ದೇಣಿಕೆ ಹಣವನ್ನು ಸಂಗ್ರಹಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದೆಹಲಿಯ ಕೆಂಪುಕೋಟೆ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಮಾಹಿತಿಗಳ ಪ್ರಕಾರ, ಪಾಕಿಸ್ತಾನ ಮೂಲದ ಜೈಶ್ ಸಂಘಟನೆಯು ದಾಪೇ ಎಂಬ ಪಾಕ್ ಅಪ್ಲಿಕೇಶನ್ ಸೇರಿದಂತೆ ಇನ್ನಿತರ ಡಿಜಿಟಲ್ ವಿಧಾನಗಳ ಮೂಲಕ ನಿಧಿಸಂಗ್ರಹಣೆ ಮಾಡುತ್ತಿದೆ. `ಆಪರೇಷನ್ ಸಿಂಧೂರ’ಕ್ಕೆ ಪ್ರತೀಕಾರವಾಗಿ ಜೈಶ್ ಸಂಘಟನೆಯು ಮಹಿಳೆಯರ ನೇತೃತ್ವದಲ್ಲಿ ದಾಳಿಗೆ ಸಂಚು ರೂಪಿಸುತ್ತಿದೆ ಎಂದು ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಜೈಶ್ ಸಂಘಟನೆಯು ಮಹಿಳಾ ಘಟಕವನ್ನು ಹೊಂದಿದೆ. ಜೈಶ್‌ನ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರಿ ಸಾದಿಯಾ ನೇತೃತ್ವದಲ್ಲಿ ಮಹಿಳಾ ಘಟಕ ಮುನ್ನಡೆಯುತ್ತಿದೆ. ಕೋಟೆ ಸ್ಫೋಟದ ಪ್ರಮುಖ ಶಂಕಿತರಲ್ಲಿ ಒಬ್ಬಳಾದ ಡಾ. ಶಾಹಿನಾ ಸಯೀದ್ ಕೂಡ ಮಹಿಳಾ ಘಟಕದ ಸದಸ್ಯಳಾಗಿದ್ದಳು. ಅಲ್ಲದೇ `ಮೇಡಂ ಸರ್ಜನ್’ ಎಂಬ ಹೆಸರನ್ನು ಹೊಂದಿದ್ದಳು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!