ಉದಯವಾಹಿನಿ, ಸೆಲೆಬ್ರಿಟಿಗಳು ಸಾಮಾನ್ಯರಂತೆ ಸಾರ್ವಜನಿಕ ಸ್ಥಳದಲ್ಲಿ ಜನರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಹೀಗ್ ಮಾಡ್ಬೇಕು ಎಂದು ಅಪೇಕ್ಷೆ ಉಂಟಾದಾಗ ಕೆಲವರು ಮುಖವನ್ನು ಮುಚ್ಚಿಕೊಂಡು ಇಷ್ಟ ಬಂದಂತೆ ಸಾರ್ವಜನಿಕ ಸ್ಥಳಕ್ಕೆ ಹೋಗುತ್ತಾರೆ. ಇದೀಗ ಹಾಗೆಯೇ ಮಾಡಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಐತಿಹಾಸಿಕ ಹಿನ್ನೆಲೆಯಳ್ಳ ಬೆಂಗಳೂರಿನ ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿ ಮುಖಕ್ಕೆ ಸಿಂಹದ ಮುಖವಾಡದ ಮಾಸ್ಕ್ ಧರಿಸಿ ಬಿಂದಾಸ್ ಆಗಿ ಸುತ್ತಾಡಿದ್ದಾರೆ. ಪರಿಷೆ ಸುತ್ತುವ ರಚ್ಚು ಇದು ಒಂದು ಅದ್ಭುತ ಅನುಭವ ಎಂದು ಹೇಳಿ ಖುಷಿ ಪಟ್ಟಿದ್ದಾರೆ.
ವಿಶೇಷ ಅಂದ್ರೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜನರ ಸಮೂಹದಲ್ಲಿ ನಿಂತು ಅವರಾಗೇ ಹೋಗಿ ಪೋಸ್ ಕೊಟ್ಟಿದ್ದಾರೆ. ಅಲ್ಲಿದ್ದವರಿಗೆ ಯಾರಿಗೂ ತಮ್ಮನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಹೇಳಿ ಖುಷಿ ಪಟ್ಟಿದ್ದಾರೆ. ಬಳಿಕ ವೀಡಿಯೋದಲ್ಲಿ ಮನವಿ ಮಾಡಿ `ನನ್ನ ಜೊತೆ ಸೆಲ್ಫಿ ತಗೊಂಡವರು ನನಗೆ ಟ್ಯಾಗ್ ಮಾಡಿ’ ಎಂದಿದ್ದಾರೆ.
