ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಹಾಡುಹಗಲೆ ನಡೆದ ದರೋಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2.5 ವರ್ಷಗಳಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಗಾಗಿದೆ. ಜನರಲ್ಲಿ ಆತಂಕ ಶುರುವಾಗಿದೆ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಸಾಕಷ್ಟು ಪ್ರಕರಣಗಳು ನಿತ್ಯ ನೋಡ್ತೀವಿ. ಗೃಹ ಸಚಿವರಿಗೆ ಏನೇ ಕೇಳಿದ್ರು ಗೊತ್ತಿಲ್ಲ ಅಂತಾರೆ. ಇದು ದಿಕ್ಕು-ದೆಸೆ ಇಲ್ಲದ ಸರ್ಕಾರ ಆಗಿದೆ ಅಂತ ವಾಗ್ದಾಳಿ ನಡೆಸಿದರು.
ರಾಜ್ಯದ ಜನತೆ ಆತಂಕ ಪಡೋ ವಿಚಾರ ಇದು.
ಗೃಹ ಸಚಿವರು ಏನ್ ಉತ್ತರ ಕೊಡ್ತಾರೆ ನೋಡೊಣ. ಆಡಳಿತ ವೈಫಲ್ಯಗಳು ಇದ್ದಾಗ, ಸರ್ಕಾರದಲ್ಲಿ ರೌಡಿಗಳು, ದಡೋರೆ, ಕಳ್ಳತನ ಮಾಡೋರಿಗೆ ಪಾಠ ಕಲಿಸೋದಿಲ್ಲ ಅಲ್ಲಿವರೆಗೂ ಅವರು ಮೋಟಿವೇಶನ್ ಆಗಿ ಇದನ್ನ ತಗೋತಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಘಟನೆ ಬಗ್ಗೆ ಸಂಪೂರ್ಣವಾಗಿ ಉತ್ತರ ಕೊಡಬೇಕು. ಮುಂದೆ ಹೀಗೆ ಆಗದಂತೆ ಹೇಗೆ ಎಚ್ಚರವಹಿಸುತ್ತಾರೆ ಎಂದು ಸರ್ಕಾರ ಉತ್ತರ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಜಾಹಿರಾತು ಕೊಟ್ಟಿದ್ದು, ಭ್ರಷ್ಟಾಚಾರ ಮಾಡಿದ್ದೇ ಕಾಂಗ್ರೆಸ್ ಪಕ್ಷದ 2.5 ವರ್ಷದ ಸಾಧನೆ. ಸರ್ಕಾರಕ್ಕೆ 2.5 ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, 2.5 ವರ್ಷದಲ್ಲಿ ಈ ಸರ್ಕಾರದ ಸಾಧನೆ ಏನು ಇಲ್ಲ.ಜಾಹಿರಾತು ಕೊಟ್ಟಿದ್ದೇ ಈ ಸರ್ಕಾರದ ಸಾಧನೆ. ಜಾಹಿರಾತಿಗೆ ಸೀಮಿತ ಆಗಿರೋ ಸರ್ಕಾರ ಇದು.7 ಕೋಟಿ ಕನ್ನಡಿಗರ ತೆರಿಗೆ ಹಣ ಜಾಹೀರಾತಿಗೆ ಸ್ವೇಚ್ಚಾಚಾರವಾಗಿ ಬಳಕೆ ಆಗ್ತಿದೆ ಅಂತ ಕಿಡಿಕಾರಿದರು.
