ಉದಯವಾಹಿನಿ, ಬೆಂಗಳೂರು: ಬಿಜೆಪಿ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿಪಕ್ಷವಾಗಿ ಇಡೀ ದೇಶದಲ್ಲಿ ವಿಫಲವಾಗಿರೋ ವಿಪಕ್ಷ ಎಂದರೆ ಅದು ಕರ್ನಾಟಕದ ಬಿಜೆಪಿ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ದರೋಡೆಗೆ ಕೇಸ್ ಹಿನ್ನೆಲೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹೇಳಿಕೆ ರಾಜಕೀಯ ಮಾತು. ಬಿಜೆಪಿ ವಿರೋಧ ಪಕ್ಷದ ಜವಾಬ್ದಾರಿ ನಡೆಸುತ್ತಿಲ್ಲ. ಸಂಪೂರ್ಣವಾಗಿ ವಿಫಲವಾಗಿರೋ ವಿಪಕ್ಷ ಈ ದೇಶದಲ್ಲಿ ಇದ್ದರೆ ಅದು ಕರ್ನಾಟಕದ ಬಿಜೆಪಿ. ಅವರಿಗೆ ಮಾತಾಡೋ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ಪ್ಯಾಮ್ ಕರೆಗೆ ನಿಯಂತ್ರಣ – ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್ ಈಗ ಮಾತನಾಡುವ ಬಿಜೆಪಿಯ ಎಲ್ಲರು ಹಗರಣಗಳಲ್ಲಿ ಮುಳುಗಿ, ಭ್ರಷ್ಟಾಚಾರ ಮಾಡಿ ಜೈಲುವಾಸ ಅನುಭವಿಸಿರೋ ನಾಯಕರ ಸರ್ಕಾರ ಕೊಟ್ಟಿರೋ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿ ಅವರ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನರಿಗೂ ಅವರು ಏನು ಅಂತ ಗೊತ್ತಾಗಿದೆ. ಬೆಂಗಳೂರು ದರೋಡೆ ಕೇಸ್ ಗಂಭೀರವಾಗಿ ಗೃಹ ಸಚಿವರು ತೆಗೆದುಕೊಂಡಿದ್ದಾರೆ. ಬುಧವಾರ ಸಿಎಂ-ಗೃಹ ಮಂತ್ರಿ ಸಭೆ ಮಾಡಿದ್ದಾರೆ. ಡಿಜಿ ಅವರು ಸಭೆಯಲ್ಲಿ ಇದ್ದರು. ಆದಷ್ಟು ಬೇಗ ಅವರನ್ನ ಪತ್ತೆಹಚ್ಚುವ ವಿಶ್ವಾಸ ಪೊಲೀಸರು ಕೊಟ್ಟಿದ್ದಾರೆ. ಸಿಎಂ ಅವರು ನಿರ್ದೇಶನ ನೀಡಿದ್ದಾರೆ. ಆದಷ್ಟೂ ಬೇಗ ದರೋಡೆ ಮಾಡಿದವರು ಪತ್ತೆ ಆಗುತ್ತಾರೆ ಎಂದು ತಿಳಿಸಿದರು.
