ಉದಯವಾಹಿನಿ, ಹೈದರಾಬಾದ್: ರಾಸಾಯನಿಕ ಸಾಗಿಸುತ್ತಿದ್ದ ಆ್ಯಸಿಡ್ ಟ್ಯಾಂಕರ್‌ಗೆ ಖಾಸಗಿ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿರುವ ಘಟನೆ ಮೆಹಬೂಬ್‌ನಗರ ಜಿಲ್ಲೆಯ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಆ್ಯಸಿಡ್ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ರಾಸಾಯನಿಕ ಚೆಲ್ಲಿ ರಸ್ತೆಯೇ ಕಾಣದಂತೆ ದಟ್ಟ ಹೊಗೆ ಆವರಿಸಿದೆ. ಮೆಹಬೂಬ್‌ನಗರದ ಜಡ್ಚೆರ್ಲಾ ಬಳಿಯ ಮಾಚರಂ ಫ್ಲೈಓವರ್‌ನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸೇಫ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್ ಚಿತ್ತೂರಿನಿಂದ ಹೈದರಾಬಾದ್‌ಗೆ ತೆರಳುತ್ತಿತ್ತು. ಸುಮಾರು 26 ಪ್ರಯಾಣಿಕರು ಬಸ್‌ನಲ್ಲಿದ್ದರು. ಸ್ಲೀಪರ್ ಬಸ್ ಹಿಂಬದಿಯಿಂದ ಟ್ಯಾಂಕರ್‌ಗೆ ಗುದ್ದಿದ ಪರಿಣಾಮ ಹೈಡ್ರೋಕ್ಲೋರೈಡ್ ಆಮ್ಲ ರಸ್ತೆಗೆ ಚೆಲ್ಲಿದೆ. ಕೂಡಲೇ ಬಸ್ ಚಾಲಕ ಎಲ್ಲ ಪ್ರಯಾಣಿಕರನ್ನ ಕೆಳಗಿಳಿಸಿದ್ದಾನೆ. ಅವಸರದಲ್ಲಿ ಇಳಿಯುವಾಗ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದ್ರೆ ನೆಲಕ್ಕೆ ಚೆಲ್ಲಿದ ಹೈಡ್ರೋಕ್ಲೋರೈಡ್ ಆಮ್ಲ ಬೆಂಕಿ ಹೊತ್ತಿಕೊಳ್ಳದೇ ದಟ್ಟ ಹೊಗೆಯಷ್ಟೇ ಆವರಿಸಿದೆ. ಇದರಿಂದ ಬೆಂಕಿ ಕಾಣಿಸಿಕೊಳ್ಳದೇ ದೊಡ್ಡ ಅನಾಹುತ ತಪ್ಪಿದೆ ಎಂದು ವರದಿಗಳು ತಿಳಿಸಿವೆ
