ಉದಯವಾಹಿನಿ, ಗಾಜಾ, ಪ್ಯಾಲೇಸ್ಟಿನ್: ಗಾಜಾ ನಗರದ ಮೇಲೆ ಬುಧವಾರ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, 27 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಎರಡು ದೇಶಗಳು ಪರಸ್ಪರ ಆರೋಪಿಸಿವೆ.ಎರಡು ದೇಶಗಳ ನಡುವೆ ಕಳೆದ ತಿಂಗಳು ಕದನ ವಿರಾಮ ಜಾರಿಗೆ ಬಂದ ನಂತರ ಗಾಜಾದಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಸಹ ಒಂದು. ಕದನ ವಿರಾಮದ ಹೊರತಾಗಿ ಇಸ್ರೇಲ್ ಲೆಬನಾನ್ನ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸರಣಿ ದಾಳಿಗಳನ್ನು ಘೋಷಿಸಿದ ನಂತರ ಈ ದಾಳಿ ನಡೆದಿದೆ.
ಉತ್ತರ ಗಾಜಾ ನಗರದಲ್ಲಿ 14 ಜನರು ಮತ್ತು ದಕ್ಷಿಣದ ಖಾನ್ ಯೂನಿಸ್ ಪ್ರದೇಶದಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಕದನ ವಿರಾಮ ಉಲ್ಲಂಘಿಸಿ ಹಮಾಸ್ ಉಗ್ರರು ಇಸ್ರೇಲ್ ಸೇನಾಪಡೆ ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ತಿಳಿಸಿದೆ. ಈ ಆರೋಪ ನಿರಾಕರಿಸಿರುವ ಹಮಾಸ್, ಈ ಇಸ್ರೇಲ್ ಅಪಾಯಕಾರಿ ದಾಳಿ ನಡೆಸಿದೆ ಎಂದು ಆರೋಪಿಸಿದೆ. ಈ ದಾಳಿಯು ಕದನ ವಿರಾಮವನ್ನು ಅಪಾಯಕ್ಕೆ ಸಿಲುಕಿಸಬಹುದು.
ಪ್ರತ್ಯಕ್ಷದರ್ಶಿಗಳ ನೋವಿನ ಮಾತು: ಘಟನೆ ಕುರಿತು ಎಎಫ್ಪಿ ಜೊತೆಗೆ ಮಾತನಾಡಿರುವ 50 ವರ್ಷದ ಅಹ್ರಫ್ ಅಬು ಸುಲ್ತಾನ್, ಇಸ್ರೇಲ್- ಹಮಾಸ್ ಕದನದಿಂದಾಗಿ ಕಳೆದೊಂದು ವರ್ಷದ ಹಿಂದೆ ತಮ್ಮ ಸ್ಥಳ ತೊರೆದು ಸ್ಥಳಾಂತರಗೊಂಡಿದ್ದೆವು. ಕದನ ವಿರಾಮದ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಭಾನುವಾರ ಗಾಜಾ ನಗರಕ್ಕೆ ಮರಳಿದ್ದೆವು. ದಾಳಿಯಿಂದ ನಾಶಗೊಂಡಿದ್ದ ಮನೆಯ ಒಂದು ಕೋಣೆಯನ್ನು ದುರಸ್ತಿ ಮಾಡಿ ಕೇವಲ ಎರಡು ದಿನಗಳ ಹಿಂದೆ ನೆಲೆಸಲು ಕಷ್ಟಪಡುತ್ತಿರುವ ಹೊತ್ತಿನಲ್ಲಿ ಈ ದಾಳಿ ನಡೆದಿದ್ದು, ಮತ್ತೆ ಸಾವು ಸಂಭವಿಸಿದೆ ನಮಗೆ ಉಸಿರಾಡಲು ಕೂಡ ಅವಕಾಶ ನೀಡಲಾಗುತ್ತಿಲ್ಲ ಎಂದಿದ್ದಾರೆ.
