ಉದಯವಾಹಿನಿ, ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಆಶಸ್‌ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XI ಅನ್ನು (Australia ಪ್ರಕಟಿಸಲಾಗಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ ಜೇಕ್‌ ವೆದರಾಲ್ಡ್‌ ಹಾಗೂ ಜೇಕ್‌ ಡಗೆಟ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ನಿಯಮಿತ ನಾಯಕ ಪ್ಯಾಟ್‌ ಕಮಿನ್ಸ್‌ ಅಲಭ್ಯರಾಗಿದ್ದು, ಹಂಗಾಮಿ ನಾಯಕ ಸ್ಟೀವನ್‌ ಸ್ಮಿತ್‌ ಅವರು ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ತಂಡ ತನ್ನ ಅಗ್ರ ಹಾಗೂ ಮಧ್ಯಮ ಕ್ರಮಾಂಕದಲ್ಲಿ ತನ್ನ ಸಂಯೋಜನೆಯನ್ನು ಉತ್ತಮಪಡಿಸಿಕೊಂಡಿದೆ.

ಆಲ್‌ರೌಂಡರ್‌ ಬೇ ವೆಬ್‌ಸ್ಟರ್‌ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಹಿರಿಯ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಅವರ ಜೊತೆಗೆ ಜೇಕ್‌ ವೆದರಾಲ್ಡ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಮಾರ್ನಸ್‌ ಲಾಬುಶೇನ್‌ ಆಡಲಿದ್ದಾರೆ. ಇವರು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಲಾಬುಶೇನ್‌ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಮಾರ್ನಸ್‌ ಲಾಬುಶೇನ್‌ ಅವರಿಂದ ಕ್ಯಾಮೆರಾನ್‌ ಗ್ರೀನ್‌ ಆರನೇ ಕ್ರಮಾಂಕಕ್ಕೆ ಇಳಿದಿದ್ದಾರೆ. ಇದರ ಪರಿಣಾಮ ಬೇ ವೆಬ್‌ಸ್ಟರ್‌ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಜಾಶ್‌ ಹೇಝಲ್‌ವುಡ್‌ ಅವರ ಸ್ಥಾನದಲ್ಲಿ ಬ್ರೆಂಡನ್‌ ಡಗೆಟ್‌ ಅವರು ಆಡುತ್ತಿದ್ದಾರೆ. ಆದರೆ, ಮಾರ್ನಸ್‌ ಲಾಬುಶೇನ್‌ ಅವರನ್ನು ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಲಾಗುವುದೇ? ಅಥವಾ ವಿಶೇಷ ಬ್ಯಾಟ್ಸ್‌ಮನ್‌ ಆಗಿ ಆಡಿಸಲಾಗುತ್ತದೆಯೇ ಎಂದು ಕಾದು ನೋಡಬೇಕಾಗುತ್ತದೆ. ಹಂಗಾಮಿ ನಾಯಕ ಸ್ಟೀವನ್‌ ಸ್ಮಿತ್‌ ಅವರು ಆಸ್ಟ್ರೇಲಿಯಾ ಪ್ಲೇಯಿಂಗ್‌ XI ಅನ್ನು ಖಚಿತಪಡಿಸಿದ್ದಾರೆ. ಪರ್ತ್‌ ಟೆಸ್ಟ್‌ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!