ಉದಯವಾಹಿನಿ, ನವದೆಹಲಿ: ಮುಂಬರುವ 2026ರ ಐಸಿಸಿ ಅಂಡರ್-‌19 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಬುಧವಾರ ಪ್ರಕಟಿಸಿದೆ. ಹದಿನಾರನೇ ಆವೃತ್ತಿಯ ಈ ಟೂರ್ನಿಯು ನಮೀಬಿಯಾ ಹಾಗೂ ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ ಜನವರಿ 15 ರಂದು ಆರಂಭವಾಗಲಿದೆ. ಭಾರತ ತಂಡ (India U-19) ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆ ಮೂಲಕ ಭಾರತದ ವೈಭವ್‌ ಸೂರ್ಯವಂಶಿ ಅವರ ಮೇಲೆ ಈ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ. ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಕೂಡ ಈ ಟೂರ್ನಿಯಿಂದಲೇ ಬೆಳಕಿಗೆ ಬಂದವರು. ಹಾಗಾಗಿ ಮುಂಬರುವ ಟೂರ್ನಿಯಲ್ಲಿಯೂ ಹಲವು ಯುವ ಪ್ರತಿಭೆಗಳು ಬೆಳಕಿಗೆ ಬರಬಹುದು.

ನಮೀಬಿಯಾ ಹಾಗೂ ಜಿಂಬಾಬ್ವೆ ಎರಡೂ ದೇಶಗಳ ಐದು ಸ್ಥಳಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಜಿಂಬಾಬ್ವೆಯ ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದರೆ, ನಮೀಬಿಯಾದ ಎರಡು ಮೈದಾನಗಳಲ್ಲಿ ಪಂದ್ಯಗಳು ಜರುಗಲಿವೆ. 2027ರ ಏಕದಿನ ವಿಶ್ವಕಪ್‌ ಟೂರ್ನಿಯನ್ನೂ ಕೂಡ ಈ ಎರಡೂ ತಂಡಗಳು ಕೂಡ ದಕ್ಷಿಣ ಆಫ್ರಿಕಾ ಜಂಟಿ ಆತಿಥ್ಯದಲ್ಲಿ ನಡೆಸಲಿವೆ.
ಜಿಂಬಾಬ್ವೆ: ಹರಾರೆ ಸ್ಪೋರ್ಟ್ಸ್‌ ಕ್ಲಬ್‌ (ಹರಾರೆ), ತಕಶಿಂಗ ಸ್ಪೋರ್ಟ್ಸ್‌ ಕ್ಲಬ್‌ (ಹರಾರೆ), ಕ್ವೀನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ (ಬುಲವಾಯೊ)
ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಹಾಗೂ ಒಂದೊಂದು ಗುಂಪಿನಲ್ಲಿ ನಾಲ್ಕು ತಂಡಗಳು ಸ್ಥಾನ ಪಡೆದಿವೆ. ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ತಂಡವನ್ನು ಆಯುಷ್‌ ಮ್ಹಾತ್ರೆ ಮುನ್ನಡೆಸಲಿದ್ದಾರೆ ಹಾಗೂ ಭಾರತ ಎ ಗುಂಪಿನಲ್ಲಿ ಯುಎಸ್‌ಎ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ತಂಡಗಳ ಜತೆ ಲೀಗ್‌ ಹಂತದಲ್ಲಿ ಕಾದಾಟ ನಡೆಸಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

Leave a Reply

Your email address will not be published. Required fields are marked *

error: Content is protected !!