ಉದಯವಾಹಿನಿ, ಅಹ್ಮದಾಬಾದ್: ಇತ್ತೀಚಿನ ದಿನದಲ್ಲಿ ದಾಂಪತ್ಯ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿದೆ. ಸಣ್ಣ ಪುಟ್ಟ ಕಾರಣಕ್ಕೆ ಡಿವೋರ್ಸ್ ಮೊರೆಹೋಗುವವರು ಒಂದೆಡೆಯಾದರೆ ಅಕ್ರಮ ಸಂಬಂಧದಿಂದಾಗಿ ದಾಂಪತ್ಯ ಬದುಕಿಗೆ ಅಂತ್ಯ ಹಾಡುವವರೂ ಇದ್ದಾರೆ. ಅಂತೆಯೇ ಗುಜರಾತ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಕಂಬಾಲಾ ಎಂಬಾತ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು (Crime News) ತನ್ನ ಮನೆಯ ಬಳಿಯೇ ಹೂತಿಟ್ಟ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕೊಲೆ ಕಾರಣವನ್ನು ಪತ್ತೆ ಹಚ್ಚಿದ್ದ ಪೊಲೀಸರಿಗೆ ದೊಡ್ಡ ಶಾಖ್ ಎದುರಾಗಿದೆ. ಅಧಿಕಾರಿಯು ಅರಣ್ಯ ಇಲಾಖೆಯಲ್ಲಿರುವ ಮಹಿಳಾ ಸಿಬ್ಬಂದಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ಆ ಮಹಿಳೆಗೋಸ್ಕರವೇ ಕೊಲೆ ಮಾಡಿದ್ದು ತನಿಖೆ ವೇಳೆ ತಿಳಿದುಬಂದಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದು ಅದಕ್ಕೆ ತನ್ನ ದಾಂಪತ್ಯ ಜೀವನವೇ ತೊಡಕಾಗಿದ್ದ ಕಾರಣ ಈ ಹತ್ಯೆ ಮಾಡಿದ್ದಾಗಿ ತಿಳಿದು ಬಂದಿದೆ.
ಗುಜರಾತ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಕಂಬಾಲಾ ಅವರು 2022 ರಿಂದಲೂ ಮಹಿಳಾ ಅರಣ್ಯ ಕಾರ್ಯಕರ್ತೆಯೊಂದಿಗೆ ಸ್ನೇಹ ಬೆಳೆಸಿದ್ದರು ಬಳಿಕ ಇದೆ ಸ್ನೇಹವೇ ಅಕ್ರಮ ಸಂಬಂಧವಾಗಿ ತಿರುಗಿದೆ. ಅರಣ್ಯ ಅಧಿಕಾರಿಯನ್ನು ಇತ್ತೀಚೆಗೆ ಭಾವನಗರಕ್ಕೆ ವರ್ಗಾಯಿಸ ಲಾಯಿತು, ಆದರೆ ಅವರ 40 ವರ್ಷದ ಪತ್ನಿ ನಯನಾ, 13 ವರ್ಷದ ಮಗಳು ಪ್ರೀತಾ ಮತ್ತು 9 ವರ್ಷದ ಮಗ ಭವ್ಯಾ ಸೂರತ್‌ನಲ್ಲಿ ವಾಸಿಸುತ್ತಿದ್ದರು. ಅವರು ಇತ್ತೀಚೆಗಷ್ಟೇ ದೀಪಾವಳಿಗೆಂದು ಭಾವನಗರಕ್ಕೆ ಬಂದಿದ್ದರು. ಈ ವೇಳೆ ಪತ್ನಿ ಅಲ್ಲಿಯೇ ಇರುತ್ತೇನೆ ಎಂದು ಹಠ ಮಾಡಿದ್ದಾಳೆ.. ಹೀಗಾಗಿ ಕೋಪಗೊಂಡು ಆಕೆಯನ್ನು ಸಾಯಿಸಲು ಅರಣ್ಯಾಧಿಕಾರಿ ಪ್ಲ್ಯಾನ್ ಮಾಡಿದ್ದಾರೆ.
