ಉದಯವಾಹಿನಿ, ಟಾಲಿವುಡ್‌ನ ನಟಿ ಸಮಂತಾ ರುತ್‌ಪ್ರಭು ಸಿನಿಮಾ ಹೊರತುಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಬ್ರ್ಯಾಂಡ್ ಪ್ರಮೋಷನ್, ಸಿನಿಮಾ ಪ್ರಮೋಷನ್ ಹಾಗೂ ತಮ್ಮ ಹಳೆ ನೆನಪುಗಳನ್ನು ಸೋಶಿಯಲ್ ಮೀಡಿಯಾ ವೇದಿಕೆ ಮೂಲಕ ಆಗಾಗ ಹೊರಹಾಕುತ್ತಲೇ ಇರುತ್ತಾರೆ. ಇದೀಗ ತಮ್ಮ ಹಳೆ ನೆನಪುಗಳನ್ನು ಈ ಮೂಲಕ ಹಂಚಿಕೊಂಡಿದ್ದಾರೆ.
ಜಿಮ್‌ನಲ್ಲಿ (Gym) ವರ್ಕೌಟ್ ಮಾಡಿ ಫಿಟ್ ಆಗಿದ್ದ ಸ್ಟ್ರಾಂಗ್ ಬ್ಯಾಕ್‌ನ ಫೋಟೋವನ್ನ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಮನಸ್ಸಿಗೆ ಮುಟ್ಟುವ ಹಾಗೆ ಕೆಲ ಸಾಲುಗಳ ಮೂಲಕ ತಮ್ಮ ಅಂತರಂಗದ ಭಾವನೆಯನ್ನ ವ್ಯಕ್ತಪಡಿಸಿದ್ದಾರೆ. ಬಹುಷಃ ಸಮಂತಾ ಅನಾರೋಗ್ಯಕ್ಕೀಡಾದ ಬಳಿಕ ಮತ್ತೆ ಈ ರೀತಿ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಳೆಯ ಫೋಟೋದೊಂದಿಗೆ ಹಳೆ ನೆನಪು ಶೇರ್ ಮಾಡಿದ್ದಾರೆ. ಈ ಮೂಲಕ ಆ್ಯಕ್ಷನ್ ಮೋಡ್..ಬೀಸ್ಟ್ ಮೋಡ್ ಅಂತಾ ಬರೆದುಕೊಂಡಿದ್ದಾರೆ.
ಸಮಂತಾ ಆಗಾಗ ರಾಜ್ ನಿಧಿಮೋರು ಜೊತೆ ಕಾಣಿಸಿಕೊಂಡು ಸುದ್ದಿಯಾಗುತ್ತಲೇ ಇದ್ದಾರೆ. ಎರಡನೇ ಮದ್ವೆಗೆ ತಯಾರಾಗಿದ್ದಾರೆ ಎನ್ನುವ ಗಾಳಿಸುದ್ದಿ ಜೋರಾಗಿ ಹಬ್ಬಿದೆ. ಅವರೊಟ್ಟಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಸಮಂತಾ. ಈಗ ಸಾಮಾಜಿಕ ಜಾಲತಾಣದಲ್ಲಿ ಜಿಮ್‌ನ ವರ್ಕೌಟ್ ಫೋಟೋ ಸಕತ್ ಸೌಂಡ್ ಮಾಡುತ್ತಿದೆ.
