ಉದಯವಾಹಿನಿ, ದುಬೈ : ದುಬೈಯಲ್ಲಿ ನಡೆಯುತ್ತಿರುವ ಏರ್ ಶೋದಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನವಾಗಿದೆ. ಎಚ್‌ಎಎಲ್ ನಿರ್ಮಿತ ಈ ಲಘು ಯುದ್ಧ ವಿಮಾನ ಏಕಾಏಕಿ ಭೂಮಿಗೆ ಅಪ್ಪಳಿಸಿದೆ ಪೈಲಟ್ ಮೃತಪಟ್ಟಿದ್ದಾರೆ. ನವೆಂಬರ್ 21ರ ಮಧ್ಯಾಹ್ನ 2:10ರ ವೇಳೆಗೆ ಈ ಘಟನೆ ನಡೆದಿದೆ. ಏರ್ ಶೋ ನಡೆಯುತ್ತಿರುವ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ತೇಜಸ್ ಪತನವಾಗುತ್ತಿದ್ದಂತೆ ದಟ್ಟ ಹೊಗೆ ವ್ಯಾಪಿಸಿದ್ದು, ವಿಡಿಯೊ ವೈರಲ್ ಆಗಿದೆ.
ವಿಶ್ವದ ಅತಿದೊಡ್ಡ ಏರ್ ಶೋಗಳಲ್ಲಿ ಒಂದಾದ, 2 ವರ್ಷಕ್ಕೊಮ್ಮೆ ನಡೆಯುವ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ. ಈ ಏರ್ ಶೋ 5 ದಿನಗಳಿಂದ ನಡೆಯುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
