ಉದಯವಾಹಿನಿ, ಸೀರಿಯಲ್ ನಟಿ ನಮ್ರತಾ ಗೌಡ ವಿಯೆಟ್ನಾಂ ಪ್ರವಾಸದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏನನ್ನೂ ಹೇಳದೇ ಕೇವಲ ವಿಯೆಟ್ನಾಂ ಧ್ವಜದ ಸಿಂಬಲ್ ಜೊತೆಗೆ ಫೋಟೋ ಡಂಪ್ ಮಾಡಿದ್ದಾರೆ. ಬಹುಶಃ ನಮ್ರತಾ ಸೋಲೋ ಪ್ರವಾಸ ಕೈಗೊಂಡಂತಿದೆ. ವಿಯೆಟ್ನಾಂನಲ್ಲಿ ಒಬ್ಬರೇ ಶಾಪಿಂಗ್ ಮಾಡ್ತಿರುವ ಒಬ್ಬರೇ ಕುಳಿತು ಜ್ಯೂಸ್ ಕುಡಿಯುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ `ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಿರುವ ನಮ್ರತಾ ಕೆಲಸದ ಒತ್ತಡದ ಮಧ್ಯೆ ಪ್ರವಾಸ ಕೈಗೊಂಡಿದ್ದಾರೆ.
ಸದ್ಯಕ್ಕೆ ಸೊಲೋ ಟ್ರಿಪ್ ಟ್ರೆಂಡ್‌ನಲ್ಲಿದೆ. ನಟಿಯರಂತೂ ಹೆಚ್ಚೆಚ್ಚು ಸೋಲೋ ಟ್ರಿಪ್ ಮಾಡುವ ಮೂಲಕ ಇತರರಿಗೂ ಸ್ಫೂರ್ತಿಯಾಗುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಮ್ರತಾ ಕೂಡ ಸೋಲೊ ಟ್ರಿಪ್ ಕೈಗೊಂಡಿರುವಂತೆ ಸದ್ಯಕ್ಕೆ ಭಾಸವಾಗ್ತಿದೆ.
