ಉದಯವಾಹಿನಿ, ಕುಶಾಲನಗರ: ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷ ನಡೆಸುತ್ತಿರುವ ದೌರ್ಜನ್ಯ ವನ್ನು ಖಂಡಿಸಿ ರಾಹುಲ್ ಗಾಂಧಿಯವರಿಗೆ ನೈತಿಕ ಬೆಂಬಲ ಸೂಚಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಡಿಕೇರಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ರಾಹುಲ್ ಗಾಂಧಿಯವ ಸಂಸತ್ ಸದಸ್ಯತ್ವ ರದ್ದು ಪಡಿಸಿದ ಘಟನೆ, ರಾಹುಲ್ ವಿರುದ್ದ ದಾಖಲಿಸಿರುವ ರಾಜಕೀಯ ಪ್ರೇರಿತ ದುರುದ್ದೇಶದ ಕೇಸ್ ಗಳನ್ನು ಖಂಡಿಸಿ ಪ್ರತಿಭಟನಾಕಾರರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,ಹಿರಿಯ ಮುಖಂಡರಾದ ಟಿ.ಪಿ ರಮೇಶ್,ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್,ಹೆಚ್.ಎಂ.ನಂದಕುಮಾರ್ , ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ನಗರ ಕಾಂಗ್ರೆಸ್ ಆಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಮುಖಂಡರಾದ ಕೊಲ್ಯದ ಗಿರೀಶ್, ಸತೀಶ್, ಕಾನೆಹಿತ್ಲು ಮೊಣ್ಣಪ್ಪ , ಜುಲೇಕಾಬಿ, ಮೀನಾಜ್ ಪ್ರವಿಣ್ , ಮಂಡಿರ ಸದಾ ಮುದ್ದಪ್ಪ, ಮಮ್ತಾಜ್ ಬೇಗಂ, ಪೀಟರ್, ಅಬ್ದುಲ್ ರಜಾಕ್ , ಪುಲಿಯಂಡ ಜಗದೀಶ್, ಕಟ್ರತನ ವೆಂಕಟೇಶ್, ಪ್ರಕಾಶ್ ಆಚಾರ್ಯ, ಬಾಚಮಂಡ ಲವ ಚಿಣ್ಣಪ್ಪ, ಬೊಳ್ಳಂಡ ಶರಿ ಗಿರೀಶ್, ಅಯಿಲಫಂಡ ಪುಷ್ಪ ಪೂಣಚ್ಚ, ಸೂರಜ್ ಹೊಸೂರು, ಜೆ.ಸಿ.ಜಗದೀಶ್, ಚಂದ್ರಶೇಖರ್ ಸೇರಿದಂತೆ ನೂರಾರು ಪ್ರಮುಖರು ಭಾಗವಹಿಸಿದ್ದರು.
