ಉದಯವಾಹಿನಿ, ಈ ಚಳಿಗಾಲದಲ್ಲಿ ತಂಪಾಗಿರುವ ಹವಾಮಾನದಲ್ಲಿ ಅನೇಕರು ವಡಾ, ಪಕೋಡಾ ಹಾಗೂ ವಿವಿಧ ಬಜ್ಜಿಗಳಂತಹ ಬಿಸಿ ಕುರುಕುಲು ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಅದರಲ್ಲೂ ಈರುಳ್ಳಿ ಮೆಣಸಿನಕಾಯಿ ಬಜ್ಜಿಗಳನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುವ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಮನೆಯಲ್ಲಿ ಈ ಬಜ್ಜಿ ರೆಸಿಪಿಯನ್ನು ವಿವಿಧ ರೀತಿಯಲ್ಲಿ ಮಾಡಿರಬಹುದು. ನಾವು ತಿಳಿಸಿರುವಂತಹ ಅಳತೆಯ ಪ್ರಕಾರ ತಯಾರಿಸಿದರೆ ಈ ಬಜ್ಜಿಗಳು ಗರಿಗರಿಯಾಗಿ ಬರುತ್ತವೆ.
ಇವುಗಳು ಸಾಮಾನ್ಯವಾದ ಬಜ್ಜಿಗಳಿಗಿಂತ ಹೆಚ್ಚು ರುಚಿಯಾಗಿರುತ್ತವೆ. ಚಳಿ ಚಳಿ ವಾತಾವರಣದಲ್ಲಿ ಬಿಸಿ ಬಿಸಿ ಬಜ್ಜಿ ತಿಂದರೆ ಅದ್ಭುತ ಅನುಭವ ಲಭಿಸುತ್ತದೆ. ಈ ಬಜ್ಜಿಗಳನ್ನು ಕಡಿಮೆ ಎಣ್ಣೆಯಿಂದ ಸುಲಭವಾಗಿ ತಯಾರಿಸಬಹುದು. ಇದೀಗ ಈರುಳ್ಳಿ ಸ್ಟಪ್ಪಿಂಗ್ ಮಾಡಿದ ಮಿರ್ಜಿ ಬಜ್ಜಿಗಳನ್ನು ಮಾಡುವ ಬಗ್ಗೆ ತಿಳಿಯೋಣ.
ಕಡಲೆ ಹಿಟ್ಟು – ಒಂದೂವರೆ ಕಪ್ ಅಜವಾನ – 1 ಟೀಸ್ಪೂನ್ ಬೇಕಿಂಗ್ ಸೋಡಾ – ಸ್ವಲ್ಪ ಅರಿಶಿನ – 1 ಟೀಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು
ಬಜ್ಜಿ ಮೆಣಸಿನಕಾಯಿಗಳು – 15, ನಿಂಬೆಹಣ್ಣು – 2, ಜೀರಿಗೆ – 1 ಟೀಸ್ಪೂನ್, ಈರುಳ್ಳಿ ತುಂಡುಗಳು – 1/2 ಕಿಲೋ (250 ಗ್ರಾಂ)
ಕೊತ್ತಂಬರಿ – 1 ಕಟ್ಟು, ಎಣ್ಣೆ – ಕರಿಯಲು ಬೇಕಾದಷ್ಟು ಅಲ್ಲದೇ, ಒಂದು ಟೀಸ್ಪೂನ್ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಮತ್ತೊಂದು ಕಡೆ, ಒಲೆ ಆನ್ ಮಾಡಿ ಕಡಾಯಿಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಇದೀಗ 15 ಬಜ್ಜಿ ಮೆಣಸಿನಕಾಯಿಗಳನ್ನು ತೆಗೆದುಕೊಂಡು ಮಧ್ಯದಲ್ಲಿ ಚಾಕುವಿನಿಂದ ಸೀಳು ಮಾಡಿಕೊಳ್ಳಿ. ಬಳಿಕ ಮೆಣಸಿನಕಾಯಿಗಳನ್ನು ತಯಾರಾದ ಕಡಲೆ ಹಿಟ್ಟಿನಲ್ಲಿ ಅದ್ದಿ ಕುದಿಯುವ ಎಣ್ಣೆಗೆ ಹಾಕಬೇಕು.
ಕಡಾಯಿಯಲ್ಲಿ ಬಜ್ಜಿಗಳನ್ನು ಒಂದೊಂದಾಗಿ ಹಾಕಿದ ಬಳಿಕ ಜ್ವಾಲೆಯನ್ನು ಮಧ್ಯಮ ಉರಿಯಲ್ಲಿ ಇಡಿ. ಈಗ ಇವುಗಳನ್ನು ಎರಡೂ ಬದಿಯಲ್ಲಿ ಕರಿಯಲು ಒಂದು ಚಾಕು ಬಳಸಿಕೊಂಡು ತಿರುಗಿಸಿ. ಅದೇ ರೀತಿಯಲ್ಲಿ ಉಳಿದವುಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಬಳಿಕ ಇವುಗಳನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ತಣ್ಣಗಾಗಲು ಬಿಡಬೇಕು. ಇದೀಗ ನಿಂಬೆ ರಸ, ಮೆಣಸಿನಕಾಯಿ ಮಿಶ್ರಣ ಮಾಡಲು, ಒಂದು ಬಟ್ಟಲಿನಲ್ಲಿ ಒಂದು ಚಮಚ ಮೆಣಸಿನ ಪುಡಿಯನ್ನು ಹಾಕಿ ನಿಂಬೆ ರಸ, ಒಂದು ಚಮಚ ಜೀರಿಗೆ ಪುಡಿ, ಸ್ವಲ್ಪ ಉಪ್ಪು, ಎರಡು ಚಮಚ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಅದೇ ರೀತಿ ಇನ್ನೊಂದು ಬಟ್ಟಲಿನಲ್ಲಿ ಕತ್ತರಿಸಿದ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈಗ ತಣ್ಣಗಾದ ಮೆಣಸಿನಕಾಯಿ ಬಜ್ಜಿಗಳ ಮಧ್ಯದಲ್ಲಿ ಸೀಳು ಮಾಡಿ. ಅದಕ್ಕೆ ಈರುಳ್ಳಿ ಮತ್ತು ಕೊತ್ತಂಬರಿ ಪೇಸ್ಟ್ ಸೇರಿಸಿ.
ಬಳಿಕ ನಿಂಬೆ ರಸವನ್ನು ಹಾಕಿದರೆ ಸಾಕು ಈರುಳ್ಳಿ ಸ್ಟಪ್ಪಿಂಗ್ ಮಾಡಿದ ಮಿರ್ಜಿ ಬಜ್ಜಿ ಸವಿಯಲು ಸಿದ್ಧವಾಗಿದೆ.
