ಉದಯವಾಹಿನಿ, ಚಳಿಗಾಲವು ಶುರವಾಗಿದ್ದು, ಚಳಿ ಹೆಚ್ಚಿರುವ ದಿನಗಳಲ್ಲಿ ಬೆಚ್ಚಗಿರಲು ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಉಣ್ಣೆಯ ಬಟ್ಟೆಗಳನ್ನು ಖರೀದಿಸುವುದಾಗಲಿ ಹಾಗೂ ರಾತ್ರಿ, ಬೆಳಿಗ್ಗೆ ಕಂಬಳಿಗಳಿಂದ ದೇಹವನ್ನು ಮುಚ್ಚಿಕೊಳ್ಳುವುದಾಗಲಿ, ಇವೆಲ್ಲವೂ ಚಳಿಗಾಲದಲ್ಲಿ ಅತ್ಯಗತ್ಯ. ಪ್ರಕೃತಿಯ ಈ ಉಡುಗೊರೆಗಳಲ್ಲಿ ಒಳಾಂಗಣ ಪರಿಸರವನ್ನು ಸಕಾರಾತ್ಮಕವಾಗಿ ಹಾಗೂ ಬೆಚ್ಚಗಿಡಲು ಅತ್ಯುತ್ತಮವಾದ ಕೆಲವು ಸಸ್ಯಗಳಿವೆ.
ಈ ಸಸ್ಯಗಳು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತವೆ ಹಾಗೂ ಆರ್ದ್ರತೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ತಂಪಾದ ಹವಾಮಾನವು ನಿಮ್ಮನ್ನು ಅಸ್ವಸ್ಥಗೊಳಿಸುತ್ತಿದ್ದರೆ, ಗಾಳಿಯ ಗುಣಮಟ್ಟವನ್ನು ಸುಧಾರಿಸುವುದಲ್ಲದೇ, ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸುವ ಕೆಲವು ಒಳಾಂಗಣ ಸಸ್ಯಗಳ ಕುರಿತು ತಿಳಿಯೋಣ. ವಾತಾವರಣದಲ್ಲಿ ತೇವಾಂಶವನ್ನು ನಿಯಂತ್ರಿಸುವ ಮೂಲಕ ತಂಪು ಕಡಿಮೆ ಮಾಡುತ್ತವೆ. ಈ ಸಸಿಗಳನ್ನು ನೆಡುವ ಮೂಲಕ ನೈಸರ್ಗಿಕವಾಗಿ ನಿಮ್ಮ ಮನೆಯಲ್ಲಿ ಬೆಚ್ಚಗಿನ ಭಾವನೆಯನ್ನು ಸೃಷ್ಟಿಸಬಹುದು. ಇದೀಗ ಐದು ಸಸ್ಯಗಳ ಕುರಿತು ಅರಿತುಕೊಳ್ಳೋಣ.

ಪೀಸ್ ಲಿಲ್ಲಿ: ಸ್ಪಾತಿಫಿಲಮ್‌ನ ಕೆಲವು ಜಾತಿಗಳನ್ನು ಸಾಮಾನ್ಯವಾಗಿ ಸ್ಪಾಥ ಅಥವಾ ಪೀಸ್ ಲಿಲ್ಲಿ ಎಂದೂ ಕರೆಯುತ್ತಾರೆ. ಪೀಸ್ ಲಿಲ್ಲಿಗಳು ಆರ್ದ್ರ ಪ್ರದೇಶಗಳಲ್ಲಿ ಪ್ರಯೋಜನಕಾರಿ, ನೀವು ಅವುಗಳನ್ನು ಹೆಚ್ಚಿನ ಆರ್ದ್ರತೆ ಹೊಂದಿರುವ ಸ್ನಾನಗೃಹದಲ್ಲಿ ಇರಿಸಬಹುದು. ಈ ಸಸ್ಯವು ವಾತಾವರಣದಿಂದ ತೇವಾಂಶವನ್ನು ಹೀರಿಕೊಳ್ಳುವ ಮೂಲಕ ಕೋಣೆಯಲ್ಲಿ ಶಾಖವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ, ಪೀಸ್ ಲಿಲ್ಲಿ ಒಳಾಂಗಣ ತಾಪನ ವ್ಯವಸ್ಥೆಗಳಿಂದ ಉಂಟಾಗುವ ಶುಷ್ಕತೆಯನ್ನು ಸಹ ಎದುರಿಸುತ್ತದೆ. ಇದರ ಬಿಳಿ ಹೂವುಗಳು ಕೋಣೆಗೆ ಶಾಂತಿ ಮತ್ತು ಸೌಂದರ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಸಸ್ಯವನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಸಸ್ಯದ ಪಾತ್ರೆಯಲ್ಲಿನ ಮಣ್ಣನ್ನು ತೇವವಾಗಿಡಿ, ನೀರು ನಿಲ್ಲುವುದನ್ನು ತಪ್ಪಿಸಬೇಕು.
ಪೋಥೋಸ್ (ಮನಿ ಪ್ಲಾಂಟ್): ಪೋಥೋಸ್ ಸಸ್ಯದ ಹಸಿರು ಎಲೆಗಳು ಕೋಣೆಗೆ ತಾಜಾತನ ಹಾಗೂ ಉಷ್ಣತೆಯನ್ನು ನೀಡುತ್ತದೆ. ಇದು ಕಡಿಮೆ ಬೆಳಕಿನಲ್ಲಿಯೂ ಬೆಳೆಯುತ್ತದೆ ಹಾಗೂ ಗಾಳಿಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಈ ಸಸ್ಯವನ್ನು ಕಿಟಕಿಯ ಬಳಿ ಇರಿಸಿ. ಮಣ್ಣನ್ನು ಸ್ವಲ್ಪ ತೇವವಾಗಿಡಲು ವಾರಕ್ಕೊಮ್ಮೆ ನೀರು ಹಾಕಿ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದಲ್ಲದೇ ಮನೆಯ ಅಲಂಕಾರವನ್ನು ಹೆಚ್ಚಿಸುತ್ತದೆ.

 

Leave a Reply

Your email address will not be published. Required fields are marked *

error: Content is protected !!