ಉದಯವಾಹಿನಿ, ಹಲವರಿಗೆ ಟೊಮೆಟೊ ದಾಲ್ ಎಂದರೆ ಬಲು ಇಷ್ಟ. ಇದು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಆರ್ಡರ್ ಮಾಡಿ ಜನರು ಸವಿಯುತ್ತಾರೆ. ಹೊರಗೆ ಹೋಟೆಲ್ಗಳಲ್ಲಿ ತಿಂದರೂ ಈ ದಾಲ್ ರುಚಿಯಾಗಿರುತ್ತದೆ. ಆದರೆ, ಮನೆಯಲ್ಲಿ ಟೊಮೆಟೊ ದಾಲ್ ಮಾಡಿದಾಗಲು ಆ ರುಚಿ ಬರುವುದಿಲ್ಲ.
ಚಪಾತಿ, ತಂದೂರಿ ರೋಟಿ ಹಾಗೂ ಪರೋಟಾ ಜೊತೆಗೆ ಈ ಟೊಮೆಟೊ ದಾಲ್ ಸೇವಿಸಿದರೆ ಸಖತ್ ರುಚಿಯಾಗಿರುತ್ತದೆ. ಒಮ್ಮೆ ರುಚಿ ನೋಡಿದ ಮೇಲೆ ಪದೇ ಪದೆ ಸೇವಿಸಬೇಕು ಅನಿಸುತ್ತದೆ. ಅದಕ್ಕಾಗಿಯೇ ಈ ರೀತಿಯಲ್ಲಿ ಟೊಮೆಟೊ ದಾಲ್ ಮಾಡಿದರೆ ಇದು ಹೊರಗೆ ಸಿಗುವಂತೆ ರುಚಿ ನೀಡುತ್ತದೆ. ಇದೀಗ ಟೊಮೆಟೊ ದಾಲ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ.
ಟೊಮೆಟೊ ದಾಲ್ಗಾಗಿ ಬೇಕಾಗುವ ಸಾಮಗ್ರಿಗಳೇನು?: ತೊಗರಿ ಬೇಳೆ – ಕಾಲು ಕಪ್ ಟೊಮೆಟೊ – 4 ಈರುಳ್ಳಿ – 2 ಹುಣಸೆಹಣ್ಣು – ಸ್ವಲ್ಪ
ಉಪ್ಪು – 2 ಟೀಸ್ಪೂನ್ ಚಮಚ, ಅರಿಶಿನ – ಸ್ವಲ್ಪ, ಮೆಂತೆ – ಒಂದು ಚಿಟಿಕೆ, ಎಣ್ಣೆ – 4 ಟೀಸ್ಪೂನ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್,ಮೆಣಸಿನಕಾಯಿ – 2 ಟೀಸ್ಪೂನ್, ಧನಿಯಾ ಪುಡಿ – ಅರ್ಧ ಟೀಸ್ಪೂನ್, ಇಂಗು – ಸ್ವಲ್ಪ, ತುಪ್ಪ – 1 ಟೀಸ್ಪೂನ್, ಬೆಳ್ಳುಳ್ಳಿ – 8, ಕೆಂಪು ಮೆಣಸಿನಕಾಯಿ – 6
ಸಾಸಿವೆ – 1 ಟೀಸ್ಪೂನ್, ಜೀರಿಗೆ – 1 ಟೀಸ್ಪೂನ್, ಕರಿಬೇವು – ಸ್ವಲ್ಪ, ಕೊತ್ತಂಬರಿ – ಸ್ವಲ್ಪ
ಘಮಘಮಿಸುವಂತಹ ಟೊಮೆಟೊ ದಾಲ್ ಸಿದ್ಧಪಡಿಸಲು ಕಾಲು ಕಪ್ ತೊಗರಿ ಬೇಳೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಸಾಕಷ್ಟು ನೀರಿನೊಂದಿಗೆ ಅರ್ಧ ಗಂಟೆ ನೆನೆಸಬೇಕು.
ನಾಲ್ಕು ಟೊಮೆಟೊಗಳನ್ನು ದೊಡ್ಡ ತುಂಡುಗಳಾಗಿ ಕತ್ತರಿಸಬೇಕು. ಹಾಗೆ ಎರಡು ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿ ಇಡಿ. ನಾಲ್ಕು ಹಸಿರು ಮೆಣಸಿನಕಾಯಿಗಳನ್ನು ಲಂಬವಾಗಿ ಕತ್ತರಿಸಿಕೊಳ್ಳಿ. ಈಗ ಒಂದು ಬಟ್ಟಲಿನಲ್ಲಿ ಸ್ವಲ್ಪ ಹುಣಸೆಹಣ್ಣಿಗೆ ನೀರು ಹಾಕಿ 10 ನಿಮಿಷ ನೆನೆಸಿ.
