ಉದಯವಾಹಿನಿ,ಹುಳಿಯಾರು: ಹುಳಿಯಾರು ಹಿರಿಯೂರು ರಸ್ತೆಯ ಕೋಡಿಪಾಳ್ಯದ ಸರ್ಕಾರಿ ಶಾಲಾಕಾಲೇಜು ಬಳಿ ಸೂಚನಾ ಫಲಕಾ ಹಾಗೂ ರಸ್ತೆ ಉಬ್ಬು ಹಾಕುವಂತೆ ಎಬಿವಿಪಿ ಬುಧವಾರ ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದರು. ಹುಳಿಯಾರು ಹಿರಿಯೂರು ರಸ್ತೆಯು ರಾಷ್ಟ್ರಿಯ ಹೆದ್ದಾರಿಯಾಗಿದ್ದು ಇದೇ ಮಾರ್ಗವಾಗಿ ಹಾಸನಕ್ಕೆ ನೂರಾರು ಪೆಟ್ರೋಲ್ ಟ್ಯಾಂಕರ್‌ಗಳು ಸೇರಿದಂತೆ ನಿತ್ಯ ಸಾವಿರಾರೂ ವಾಹನಗಳು ಓಡಾಡುತ್ತವೆ. ಈ ವಾಹನಗಳ ಚಾಲಕರೆಲ್ಲರೂ ಪರಸ್ಥಳದವರಾಗಿರುವುದರಿಂದ ಕೋಡಿಪಾಳ್ಯದ ಬಳಿ ಶಾಲೆಕಾಲೇಜು ಇದೆ ಎನ್ನುವ ಅರಿವಿಲ್ಲದೆ ಸಿಕ್ಕಾಪಟ್ಟೆ ಹಾರನ್ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಅಲ್ಲದೆ ಬೆಳಗ್ಗೆಯಿಂದ ಸಂಜೆಯವರೆವಿಗೂ ಇಲ್ಲಿನ ಹೌಸ್ಕೂಲ್, ಪಿಯು ಕಾಲೇಜು, ಪದವಿ ಕಾಲೇಜಿಗೆ ಸುಮಾರು ೨೫೦೦ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ವಾಹನಗಳು ಅತೀ ವೇಗದಲ್ಲಿ ಓಡಾಡುತ್ತಿರುವುದರಿಂದ ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದಿಟ್ಟುಕೊಂಡು ಓಡಾಡುವಂತ್ತಾಗಿದೆ. ಹಾಗಾಗಿ ತಕ್ಷಣ ಸೂಚನ ಫಲಕಾ ಹಾಗೂ ರಸ್ತೆ ಉಬ್ಬು ನಿರ್ಮಿಸುವಂತೆ ಪಟ್ಟಣ ಪಂಚಾಯ್ತಿ ಮೂಲಕ ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ.
