ಉದಯವಾಹಿನಿ, ಅಫ್ಘಾನಿಸ್ತಾನ: ಒಂದೇ ದಿನದಲ್ಲಿ ಒಟ್ಟು 10,405 ಆಫ್ಘನ್ ನಾಗರಿಕರು ಇರಾನ್ ಮತ್ತು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ ಎಂದು ಪಜ್ವೋಕ್ ಸುದ್ದಿ ಸಂಸ್ಥೆ ಗುರುವಾರ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ವಲಸಿಗರ ವಾಪಸಾತಿ ಬಗ್ಗೆ ಅಫ್ಘಾನಿಸ್ತಾನ ಸರ್ಕಾರದ ಮಾಹಿತಿ; ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಉಪ ವಕ್ತಾರ ಹಮ್ದುಲ್ಲಾ ಫಿತ್ರಾತ್ ಅವರ ಪ್ರಕಾರ, ವಲಸಿಗರ ಸಮಸ್ಯೆಗಳನ್ನು ಪರಿಹರಿಸುವ ಹೈಕಮಿಷನ್ ಬುಧವಾರ 1,763 ಕುಟುಂಬಗಳ ಮರಳುವಿಕೆಯನ್ನು ದಾಖಲಿಸಿದೆ. ಫಿತ್ರಾತ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
1,534 ವ್ಯಕ್ತಿಗಳಿಗೆ ಮಾನವೀಯ ನೆರವು: 2,222 ಹಿಂದಿರುಗಿದ ಕುಟುಂಬಗಳ 13,303 ಜನರನ್ನು ಅವರ ತವರು ಪ್ರಾಂತ್ಯಗಳಿಗೆ ಕಳುಹಿಸಿ ಕೊಡಲಾಗಿದೆ. 1,534 ವ್ಯಕ್ತಿಗಳಿಗೆ ಮಾನವೀಯ ನೆರವು ನೀಡಲಾಗಿದೆ ಎಂದು ಫಿತ್ರಾತ್ ಮಾಹಿತಿ ನೀಡಿದ್ದಾರೆ. ಭಾನುವಾರ 12,666 ಆಫ್ಘನ್ ನಿರಾಶ್ರಿತರನ್ನು ಇರಾನ್ ಮತ್ತು ಪಾಕಿಸ್ತಾನದಿಂದ ವಾಪಸ್ ಕಳುಹಿಸಲಾಯಿತು. ಮಂಗಳವಾರ 7,326 ಅಫ್ಘಾನಿಗಳನ್ನು ಬಲವಂತವಾಗಿ ವಾಪಸ್ ಕಳುಹಿಸಲಾಯಿತು ಎಂದು ವರದಿಯಾಗಿದೆ.
ಬಲೂಚಿಸ್ತಾನದ ಚಾಗೈ ಮತ್ತು ಕ್ವೆಟ್ಟಾ ಮತ್ತು ಪಂಜಾಬ್‌ನ ಅಟಾಕ್ ಪ್ರಮುಖ ಮೂರು ಜಿಲ್ಲೆಗಳಾಗಿವೆ. ಅಲ್ಲಿ ಹೆಚ್ಚಿನ ಆಫ್ಘನ್ ನಾಗರಿಕ ಕಾರ್ಡ್ ACC ಹೊಂದಿರುವವರು ಅಥವಾ ದಾಖಲೆರಹಿತ ಆಫ್ಘನ್ ಪ್ರಜೆಗಳನ್ನು ಹತ್ತು ತಿಂಗಳಿಗಿಂತ ಹೆಚ್ಚು ಕಾಲ ಬಂಧಿಸಲಾಗಿತ್ತು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಮೌಲ್ಯಮಾಪನವನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.1 ಲಕ್ಷಕ್ಕೂ ಹೆಚ್ಚು ಆಫ್ಘನ್ಗಳ ಬಂಧನ: 2025 ರಲ್ಲಿ ಅತಿ ಹೆಚ್ಚು ಬಂಧನಗಳು ನಡೆದಿವೆ ಎಂದು ವರದಿ ಹೇಳಿದೆ, ಜನವರಿ 1 ರಿಂದ ನವೆಂಬರ್ 8, 2025 ರವರೆಗೆ 100,971 ಆಫ್ಘನ್‌ಗಳನ್ನು ಬಂಧಿಸಲಾಗಿದೆ. 2024 ರಲ್ಲಿ 9,006 ಆಫ್ಘನ್‌ಗಳನ್ನು ಅರೆಸ್ಟ್ ಮಾಡಲಾಗಿತ್ತು. 2023 ರಲ್ಲಿ 26,299 ಆಫ್ಘನ್‌ಗಳನ್ನು ಬಂಧನ ಮಾಡಲಾಗಿತ್ತು.
