ಉದಯವಾಹಿನಿ, : ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆ ಕುರಿತು ಅಮೆರಿಕ ಮತ್ತು ಉಕ್ರೇನ್ ಮಧ್ಯೆ ಉದ್ವಿಗ ನಡುವೆಯೇ ರಷ್ಯಾದ ಅಧ್ಯಕ್ಷ ವ್ಯಾದಿಮಿರ್ ಪುಟಿನ್ ಅವರು, ಅಮೆರಿಕದ ಅಧ್ಯಕ್ಷರ 28 ಅಂಶಗಳ ಯೋಜನೆಯು 2022ರಿಂದಲೂ ನಡೆಯುತ್ತಿರುವ ರಕ್ತಸಿಕ್ತ ಯುದ್ಧವನ್ನು ಅಂತ್ಯಗೊಳಿಸಲು ‘ಅಂತಿಮ ಒಪ್ಪಂದ’ಕ್ಕೆ ಆಧಾರವಾಗಬಹುದು ಹೇಳಿದ್ದಾರೆ.
ಟಿವಿಯಲ್ಲಿ ಪ್ರಸಾರವಾದ ಹೇಳಿಕೆಗಳಲ್ಲಿ ಪುಟಿನ್ ಅಮೆರಿಕದ ಪ್ರಸ್ತಾವವನ್ನು ರಷ್ಯಾ ಸ್ವೀಕರಿಸಿದೆ ಎಂದು ದೃಢಪಡಿಸಿದರ ‘ಅಲಾಸ್ಕಾದಲ್ಲಿ ಚರ್ಚೆಯ ಸಂದರ್ಭದಲ್ಲಿ ತಾನು ಹೇಳಿದಂತೆ ಕೆಲವು ರಾಜಿಗಳನ್ನು ಮತ್ತು ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ ಅಮೆರಿಕವು ನಮಗೆ ಸೂಚಿಸಿದೆ. ಕೆಲವು ಸಂಕೀರ್ಣ ಸಮಸ್ಯೆಗಳು ಮತ್ತು ತೊಂದರೆಗಳ ಹೊರತಾಗಿ ರಷ್ಯಾ ಪ್ರಸ್ತಾವವನ್ನು ಒಪ್ಪಿಕೊಂಡಿದೆ ‘ ಎಂದು ತಿಳಿಸಿದರು.
ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾದ ಒಲವನ್ನು ವ್ಯಕ್ತಪಡಿಸಿದ ಪುಟಿನ್, ಉಕ್ರೇನ್ ಅಧ್ಯಕ್ಷ ವೊಲೊದಿಮಿ‌ರ್ ಝಲೆನಸ್ಕಿ ಅವರು ಪ್ರಸ್ತಾವವನ್ನು ತಿರಸ್ಕರಿಸಿದರೆ ಆ ದೇಶದ ಇನ್ನಷ್ಟು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಬೆದರಿಕೆಯೊಡ್ಡಿದರು. ಅಮೆರಿಕದ ಪ್ರಸ್ತಾವವು ರಷ್ಯಾದ ಬೇಡಿಕೆಗಳನ್ನು ಅನುಮೋದಿಸಿದೆ ಎಂದು ಉಕ್ರೇನ್ ಹೇಳಿದೆ.
‘ಅಧ್ಯಕ್ಷ ಟ್ರಂಪ್‌ ಅವರ ಪ್ರಸ್ತಾವವನ್ನು ಚರ್ಚಿಸಲು ಉಕ್ರೇನ್ ನಿರಾಕರಿಸಿದರೆ ಕುಪಿಯನ್ಸ್‌ನಲ್ಲಿ ನಡೆದ ಘಟನೆಗಳು ಮುಂಚೂಣಿಯ ಇತರ ಪ್ರಮುಖ ವಿಭಾಗಗಳಲ್ಲಿ ಪುನರಾವರ್ತನೆಗೊಳ್ಳಲಿವೆ ಎನ್ನುವುದನ್ನು ಝಲೆನಸ್ಕಿ ಮತ್ತು ಐರೋಪ್ಯ ಯುದ್ಧೋತ್ಸಾಹಿಗಳು ಅರ್ಥ ಮಾಡಿಕೊಳ್ಳಬೇಕು. ಒಟ್ಟಾರೆಯಾಗಿ,ಈ ಸ್ಥಿತಿಯು ನಮಗೆ ಸ್ವೀಕಾರಾರ್ಹವಾಗಿದೆ’ ಎಂದು ಪುಟಿನ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!