ಉದಯವಾಹಿನಿ, ನೇಪಾಳ: ಸೈಲೆಂಟ್ ಆಗಲಿದೆ ಅನ್ನೋ ನಂಬಿಕೆ ಸುಳ್ಳಾಗಿದ್ದು, ಮತ್ತೆ ಹೋರಾಟದ ಕಾವು ಯಾವ ಕ್ಷಣದಲ್ಲಿ ಸ್ಫೋಟಗೊಳ್ಳುತ್ತೋ ಎಂಬ ಭಯ ಕಾಡತೊಡಗಿದೆ. ಕೆಲವು ಗಂಟೆಗಳ ಹಿಂದಷ್ಟೇ ಈ ಹೋರಾಟಕ್ಕೆ ಬ್ರೇಕ್ ಹಾಕಲು 18 Gen-Z ಹೋರಾಟಗಾರರ ನಾಯಕರು & ಅಧಿಕಾರಿಗಳ ನಡುವೆ ಮಹತ್ವದ ಸಭೆ ನಡೆದಿತ್ತು.
ಅಲ್ಲದೆ ಈ ಸಭೆಯ ನಂತರ ಎಲ್ಲವೂ ಸೈಲೆಂಟ್ ಆಗಲಿದೆ ಎನ್ನುವ ನಂಬಿಕೆ ಕೂಡ ಮಾಡಿತ್ತು. ಆದರೆ ಅದೆಲ್ಲಾ ಮುಗಿದು ಹೋದ ಕಥೆ, ಯಾವ ಕ್ಷಣದಲ್ಲಿ ಇಲ್ಲಿನ ಹೋರಾಟ ದೊಡ್ಡದಾಗುತ್ತೋ? ಎಂಬ ಚಿಂತೆ ಈಗ ಮಾಡಿದೆ.
ಪ್ರತಿಭಟನೆ.. ಹಿಂಸೆ.. ಹೋರಾಟ.. ಹೀಗೆ ಭಾರತದ ನೆರೆ ದೇಶ ನೇಪಾಳದಲ್ಲಿ ನೆಮ್ಮದಿಯೇ ಇಲ್ಲ. ಕೆಲ ತಿಂಗಳ ಹಿಂದೆ ಬೃಹತ್ ಹೋರಾಟ ಮಾಡಿ, ಪ್ರಧಾನಿ ವಿರುದ್ಧ ಭರ್ಜರಿ ಭ್ರಷ್ಟಾಚಾರ ಆರೋಪ ಮಾಡಿ ಗೆದ್ದು ಬೀಗಿದ್ದ Gen-Z ಹೋರಾಟಗಾರರು ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಹೀಗೆಲ್ಲಾ ಮತ್ತೆ ಹೋರಾಟದ ವಾಸನೆ ಬರುತ್ತಿದ್ದಂತೆ ತಕ್ಷಣ ಅಲ್ಲಿನ ಆಡಳಿತ ಫುಲ್ ಅಲರ್ಟ್ ಆಗಿದ್ದು, ಕರ್ಪ್ಯೂ ಜಾರಿಗೊಳಿಸಿತ್ತು. ಗಲಾಟೆ ದೊಡ್ಡದಾಗಿದ್ದ ಹಿನ್ನೆಲೆಯಲ್ಲಿ ಮಾತುಕತೆ ಮೂಲಕ ಎಲ್ಲ ಬಗೆಹರಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಎಲ್ಲವೂ ವ್ಯರ್ಥವಾಗಿದ್ದು ಹೋರಾಟಗಾರರು ದಿಢೀರ್ ಅಲರ್ಟ್ ಆಗಿದ್ದಾರೆ.
