ಉದಯವಾಹಿನಿ, ರಿಯಲ್‌ಸ್ಟಾರ್ ಉಪೇಂದ್ರ ಅವರು ತಮ್ಮ ಸಿನಿಮಾಗಳ ಮೂಲಕ ಸಮಾಜದ ಓರೆ ಕೋರೆಗಳನ್ನ ಎತ್ತಿ ತೋರಿಸುತ್ತಾರೆ. ಇದ್ದಿದ್ದನ್ನ ಇದ್ದಂಗೆ ಹೇಳ್ತಾರೆ. ಯಾವುದೇ ವೇದಿಕೆಯಾಗಲಿ, ಸಂದರ್ಶನವಾಗಲಿ ಅಲ್ಲಿಯೇ ಕ್ಲ್ಯಾರಿಟಿ ಕೊಟ್ಟುಬಿಡ್ತಾರೆ. ಅದ್ರಲ್ಲೂ ಸಿನಿಮಾ ಇಂಡಸ್ಟ್ರಿ ಬಗ್ಗೆ ಅದು ಯಾರೇ ಮಾತಾಡಲಿ, ತಪ್ಪು ತಿಳುವಳಿಕೆ ಇದ್ದರೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಡ್ತಾರೆ. ಸದ್ಯ ʻಆಂಧ್ರ ಕಿಂಗ್ʼ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಿಯಲ್‌ಸ್ಟಾರ್‌ಗೆ ತೆಲುಗು ಸಂದರ್ಶಕರೊಬ್ಬರು ಕೇಳಿರುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. ಅಲ್ಲದೇ ಆ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ ರಿಯಲ್‌ಸ್ಟಾರ್. ಒಂದು ಕಾಲದಲ್ಲಿ ತೆಲುಗು ಹೀರೋಗೆ ಕೊಡುವ ಸಂಭಾವನೆಯಲ್ಲಿ ಒಂದು ಕನ್ನಡ ಸಿನಿಮಾ ನಿರ್ಮಾಣ ಮಾಡಬಹುದಿತ್ತಂತೆ ಎನ್ನುವ ಪ್ರಶ್ನೆಗೆ ಉಪ್ಪಿ ತಿರುಗೇಟು ನೀಡಿದ್ದಾರೆ.
ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ದೊಡ್ಡ ಬಜೆಟ್‌ನಲ್ಲಿ ಮೇಕಿಂಗ್ ಮಾಡಿದ್ದಾರೆ. ಈಗೀನ ಜನರೇಷನ್‌ಗೆ ಆ ಕಾಲದ ಸಿನಿಮಾ ಇತಿಹಾಸ ಗೊತ್ತಿಲ್ಲ. ಅವತ್ತಿನ ದಿನಗಳಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದೆ ಕನ್ನಡ ಚಿತ್ರರಂಗ. ಅಣ್ಣಾವ್ರ ʻಸನಾಧಿ ಅಪ್ಪಣ್ಣʼ, ʻಸಿಂಗಾಪುರದಲ್ಲಿ ರಾಜಾಕುಳ್ಳʼ ಅಂತ ಸಿನಿಮಾಗಳು ಕರ್ನಾಟಕದಲ್ಲಿ ಹೆಸರು ಮಾಡಿವೆ ಎಂದು ಮನದಟ್ಟು ಮಾಡಿಸಿದ್ದಾರೆ. ಕೆಜಿಎಫ್, ಕಾಂತಾರ ಚಿತ್ರಗಳೇ ದೊಡ್ಡ ಬಜೆಟ್ ಸಿನಿಮಾ ಎಂದ ಸಂದರ್ಶಕನಿಗೆ ಕನ್ನಡ ಚಿತ್ರರಂಗದ ಇತಿಹಾಸ ಹೇಳಿದ್ದಾರೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
