ಉದಯವಾಹಿನಿ, ನವೆಂಬರ್ 20ರಂದು ಪ್ರಾರಂಭವಾಗಿರುವ ಈ ಚಲನಚಿತ್ರೋತ್ಸವ 28ರವರೆಗೆ ಸಾಗಲಿದೆ. 81 ದೇಶಗಳಿಂದ 240ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇನ್ನೂ, ಭಾರತೀಯ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಸಮಾರೋಪ ಸಮಾರಂಭದಲ್ಲಿ ಹಿರಿಯ ನಟ ರಜನಿಕಾಂತ್ ಅವರನ್ನು ವಿಶೇಷವಾಗಿ ಸನ್ಮಾನಿಸಲು ಸಿದ್ಧತೆ ನಡೆದಿದೆ. ಕನ್ನಡಿಗ ಅಗ್ನಿ ನಿರ್ದೇಶನ ಚೊಚ್ಚಲ ಸಿನಿಮಾ ರುಧಿರ್ವನ ಗೋವಾದಲ್ಲಿ ನಡೆಯುತ್ತಿರುವ I ಗಾಲಾ ಪ್ರೀಮಿಯರ್ ಗೆ ಆಯ್ಕೆಯಾಗಿದೆ. ಈ ಚಿತ್ರದ ಪ್ರದರ್ಶನವಿದ್ದು, ಈಗಾಗಲೇ ಹೌಸ್ ಫುಲ್ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ರುಧಿರ್ವನ ಸಿನಿಮಾದಲ್ಲಿ ಪವನಾ ಗೌಡ, ಭೀಮ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಅವಿನಾಶ್‌ ರೈ, ಅರ್ಜುನ್‌ ಕಜೆ, ಅಪೂರ್ವ ತಾರಾಬಳಗದಲ್ಲಿದ್ದಾರೆ. ಹಾರರ್‌ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ.ರುಧಿರ್ವನ ಅಂದ್ರೆ ರಕ್ತಸಿಕ್ತವಾದ ಕಾಡು ಎಂದರ್ಥ. ಸಂದೀಪ್‌ ವೆಲ್ಲೂರಿ ಛಾಯಾಗ್ರಹಣ, ರೋಣದ ಬಕ್ಕೇಶ್ ಸಂಗೀತ, ಉಲ್ಲಾಸ್‌ ಹೈದೂರ್‌ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಅಂದಹಾಗೇ ಇದು ಕ್ರೌಡ್‌ ಫಂಡೆಂಡ್ ಸಿನಿಮಾ. ಅಗ್ನಿ, ಅವರ ಸ್ನೇಹಿತರು ಹಾಗೂ ಅವರ ಅಗ್ನಿ ಅವರ ಯೂಟ್ಯೂಬ್‌ ಚಂದಾದಾರರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪಾಯಿಂಟ್‌ ಆಫ್ ವೀವ್‌ ಪಿಕ್ಚರ್‌ ಹೌಸ್‌ ಬ್ಯಾನರ್‌ ನಡಿ ರುಧಿರ್ವನ ಸಿನಿಮಾ ಮೂಡಿಬರಲಿದೆ. ಇನ್ನು, ಸ್ಯಾಂಗ್ವಿನ್ ಹೋಲ್ಮ್ ಎಂಟರ್ಟೈನ್ಮೆಂಟ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಡಲಿದೆ.

Leave a Reply

Your email address will not be published. Required fields are marked *

error: Content is protected !!