ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಯಾರು ಸೇಫ್ ಆಗಿದ್ದಾರೆಂದು ಕಿಚ್ಚ ಸುದೀಪ್ ಒಬ್ಬೊಬ್ಬರ ಹೆಸರು ಹೇಳುತ್ತಾ ಬಂದರು. ಆರಂಭದಲ್ಲಿ ರಕ್ಷಿತಾ ಮತ್ತು ಸ್ಪಂದನಾ ಸೇಫ್ ಆದ್ರು. ನೆಕ್ಸ್ಟ್ ಯಾರು ಸೇಫ್ ಆಗ್ಬೇಕು ಅಂತ ಗಿಲ್ಲಿಗೆ ಕಿಚ್ಚ ಪ್ರಶ್ನೆ ಕೇಳಿದರು. ಅದಕ್ಕೆ ‘ನನ್ನ ಆತ್ಮೀಯರಾದ ಅಶ್ವಿನಿ ಮೇಡಂ ಸೇಫ್ ಆಗ್ಬೇಕು’ ಅಂತ ಗಿಲ್ಲಿ ಹೇಳಿದರು. ಈ ಮಾತಿಗೆ ಸುದೀಪ್ ಒಂದು ಕ್ಷಣ ಶಾಕ್ ಆದ ಪ್ರಸಂಗ ಎಪಿಸೋಡ್‌ನಲ್ಲಿ ನಡೆಯಿತು.
ಮನೆಯಲ್ಲಿ ಸ್ಪರ್ಧಿಗಳ ರಾದ್ಧಾಂತ, ಹುಚ್ಚಾಟಕ್ಕೆ ಆರಂಭದಲ್ಲೇ ಕಿಚ್ಚ ಕ್ಲಾಸ್ ತೆಗೆದುಕೊಂಡರು. ಒಬ್ಬೊಬ್ಬರ ತಪ್ಪನ್ನು ಮುಂದಿಟ್ಟು ಬೆಂಡೆತ್ತಿದರು.
ಎಲ್ಲಾ ಮುಗಿದ ಮೇಲೆ ಎಲಿಮಿನೇಷನ್ ಸಂದರ್ಭ ಬಂತು. ಮನೆಯಲ್ಲಿ 10 ಮಂದಿ ಎಲಿಮಿನೇಟ್ ಆಗಿದ್ದೀರ ಅಂತ ಸುದೀಪ್ ತಿಳಿಸಿದರು.
ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ರಕ್ಷಿತಾ ಶೆಟ್ಟಿ ಮೊದಲ ಸೇಫ್ ಸ್ಪರ್ಧಿಯಾದರು. ನಂತರ ಸ್ಪಂದನಾ ಸೇಫ್ ಆದರು. ಮೂರನೇಯವರು ಯಾರು ಸೇಫ್ ಆಗ್ಬೇಕು ಅಂತ ಗಿಲ್ಲಿ ಬಳಿ ಕಿಚ್ಚ ಪ್ರಶ್ನೆ ಮುಂದಿಟ್ಟರು. ಅದಕ್ಕೆ ಗಿಲ್ಲಿ ‘ನನ್ನ ಆತ್ಮೀಯರಾದ ಅಶ್ವಿನಿ ಮೇಡಂ ಸೇಫ್ ಆಗ್ಬೇಕು’ ಅಂತ ಗಿಲ್ಲಿ ಉತ್ತರಿಸಿದರು. ಗಿಲ್ಲಿ ಮಾತಿಗೆ ಅಶ್ವಿನಿ ಗೌಡ ಅವರಿಗೆ ನಗು ಬಂತು. ಕಿಚ್ಚ ಸುದೀಪ್‌ಗೆ ಶಾಕ್ ಆಯ್ತು.
