ಉದಯವಾಹಿನಿ, ಮುಂಬೈ: ಸಿದ್ಧ ದೇವಾಯಲಗಳಲ್ಲಿ ಚೆಂಬೂರ್–ವಾಶಿ ನಾಕಾ ಪ್ರದೇಶದ ಕಾಳಿ ಮಾತಾ ದೇವಾಲಯ ಕೂಡ ಒಂದು. ರಾಕ್ಷಸ ಸಂಹಾರ ಮಾಡುವ, ನವಗ್ರಹ ದೇವತೆಯಲ್ಲಿ ಒಂದಾದ ಕಾಳಿಯನ್ನು ಇಲ್ಲಿ ನಿತ್ಯ ಪೂಜಿಸಲಾಗುತ್ತದೆ. ಈ ದೇವಾಲಯ ಭಾರೀ ಸುದ್ದಿಯಲ್ಲಿದೆ. ಕಾಳಿ ಮಾತೆಯ ವಿಗ್ರಹಕ್ಕೆ ಕ್ರೈಸ್ತ ದೇವರಾದ ಮಾತೆ ಮೇರಿಯ ಅಲಂಕಾರವನ್ನು ಮಾಡಿರುವ ವಿಡಿಯೊ ಭಾರೀ ಹರಿದಾಡುತ್ತಿದೆ. ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಈ ಅಲಂಕಾರದ ದೃಶ್ಯ ಕಂಡು ಆಘಾತಗೊಂಡಿದ್ದಾರೆ.
ಈ ಮೂಲಕ ನೆಟ್ಟಿಗರೊಬ್ಬರು ಈ ಕಾಳಿ ಮಾತೆಯ ವಿಗ್ರಹದ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಳಿ ಮಾತೆಗೆ ಕ್ರೈಸ್ತ ಮೇರಿ ಮಾತೆ ಹೋಲುವ ಅಲಂಕಾರ ಮಾಡಿದ್ದ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚೆಂಬೂರ್–ವಾಶಿ ನಾಕಾ ಪ್ರದೇಶದ ಕಾಳಿ ಮಾತಾ ದೇವಾಲ ಯಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಂತೆಯೇ ಈ ಬಾರಿ ಕೂಡ ಬಂದ ಭಕ್ತರಿಗೆ ಕಾಳಿಯ ರೌದ್ರ ಅವತಾರ ಕಂಡಿಲ್ಲ ಬದಲಾಗಿ ಕ್ರೈಸ್ತ ಮಾತೆ ಮೇರಿಯ ಚಹರೆ ಕಂಡಿದೆ. ಗರ್ಭಗುಡಿಯಲ್ಲಿರುವ ವಿಗ್ರಹವನ್ನು ವಿಚಿತ್ರವಾಗಿ ಅಲಂಕರಿಸಿದ್ದು ಭಕ್ತರ ಕೋಪಕ್ಕೆ ಗುರಿಯಾಗುವಂತೆ ಮಾಡಿದ್ದು ಈ ಬಗ್ಗೆ ಇಲ್ಲಿನ ಸ್ಥಳೀಯರು ಮತ್ತು ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ವರದಿಯೊಂದರ ಪ್ರಕಾರ, ಸ್ಥಳೀಯರು ದರ್ಶನಕ್ಕೆ ಬಂದಾಗ ಕಾಳಿ ಮಾತೆಯು ಕಿರೀಟವನ್ನು ಧರಿಸಿ ಕ್ರೈಸ್ತ ಮಾತೆ ಮೇರಿಯಮ್ಮನನ್ನೇ ಹೋಲುವಂತೆ ಮಾರ್ಪಾಡು ಮಾಡಲಾಗಿದೆ.
