ಉದಯವಾಹಿನಿ, ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2025-26ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ಮುಂದಾಗಿದ್ದು, ಇಪಿಎಫ್‌ಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋಟ್ಯಂತರ ಉದ್ಯೋಗಿಗಳಿಗೆ ಮೊದಲಿಗಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲು ಮುಂದಾಗಿದೆ. ಇನ್ಮುಂದೆ ನಿಮ್ಮ ಪಿಎಫ್ ಖಾತೆಗೆ ಶೇ.9.25 ಬಡ್ಡಿ ದರವನ್ನು ನೀಡಲಾಗುತ್ತದೆ.
ಕಳೆದ ವರ್ಷ 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿತ್ತು. 2022-23 ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಶೇ.8.15 ರ ಬಡ್ಡಿ ದರವನ್ನು ಘೋಷಿಸಿತ್ತು. ಅದಕ್ಕೂ ಹಿಂದಿನ ಆರ್ಥಿಕ ವರ್ಷ 2022ರಲ್ಲಿ ಶೇ. 8.10 ಬಡ್ಡಿಯನ್ನು ನೀಡಿತ್ತು. ಆದರೀಗ ಏಕಾಏಕಿ ಒಮ್ಮೆಲೇ ಶೇ.1ರಷ್ಟು ಏರಿಸಿದ್ದು, 7 ಕೋಟಿ EPFO ಚಂದಾದಾರರಿಗೆ ಗುಡ್ ನ್ಯೂಸ್ ನೀಡಿದೆ.
ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಸರ್ಕಾರವು 2025–26 ಆರ್ಥಿಕ ವರ್ಷದ EPF ಬಡ್ಡಿದರವನ್ನು ಶೇ.9.25 ವರೆಗೆ ಹೆಚ್ಚಿಸುವ ಸಾಧ್ಯತೆ ಇದ್ದು, ಇದು ಪ್ರಸ್ತುತ ಶೇ.8.25 ಬಡ್ಡಿದರದಿಂದ ಸುಮಾರು ಶೇ.1ರಷ್ಟು ಮಹತ್ತರ ಏರಿಕೆ ಆಗಲಿದೆ. ಈ ಬಡ್ಡಿದರ ಏರಿಕೆಯ ಅಂತಿಮ ನಿರ್ಧಾರವನ್ನು ಜನವರಿಯಲ್ಲಿ ನಡೆಯುವ EPFO ಕೇಂದ್ರ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಸಭೆಯ ಅನುಮೋದನೆ ಹಾಗೂ ನಂತರ ಹಣಕಾಸು ಸಚಿವಾಲಯದ ಅಂಗೀಕಾರದೊಂದಿಗೆ ಹೊಸ ಬಡ್ಡಿದರ ಅಧಿಕೃತವಾಗಲಿದೆ.
ನೀವು ಇಪಿಎಫ್ ಅಕೌಂಟ್ ಹೊಂದಿದ್ದು, ಅದರಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಜಮೆಯಾಗಿದ್ದೀಯಾ ಎಂದು ಪರಿಶೀಲಿಸಲು ಮೂರು ವಿಧಾನಗಳಿದ್ದು, ನಿಮ್ಮ ಇಪಿಎಫ್ ಅಕೌಂಟ್ ಅಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಜಮೆಯಾಗಿದೆಯಾ ಎಂದು ತಿಳಿದುಕೊಳ್ಳಲು ಈ ವಿಧಾನವನ್ನು ಅನುಸರಿಸಬಹುದು.
