ಉದಯವಾಹಿನಿ, ಕೀವ್ : ಉಕ್ರೇನ್‌ಗಾಗಿ ಅಮೆರಿಕದ ಶಾಂತಿ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡುವ ಕುರಿತು ವಾರಾಂತ್ಯದಲ್ಲಿ ನಡೆಸಿದ ತುರ್ತು ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾಕ್ಕೆ ಪರವಾಗಿ ನೋಡಿದ್ದಾರೆ, ಆದರೆ ಕ್ರೆಮ್ಲಿನ್, ಅಮೆರಿಕದ ಶಾಂತಿ ಪ್ರಸ್ತಾವನೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್ – ರಷ್ಯಾ ಯುದ್ಧ ಮುಂದುವರೆದಿದೆ. ಈ ಯುದ್ಧಕ್ಕೆ ಕೊನೆ ಹಾಡಬೇಕು ಎಂದು ನಿರ್ಧರಿಸಿರುವ ಅಮೆರಿಕ, ರಷ್ಯಾ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ 28 ಅಂಶಗಳ ವಾಷಿಂಗ್ಟನ್ ಯೋಜನೆ ಸಿದ್ಧವಾಗಿದೆ. ಈ ಶಾಂತಿ ಮಾತುಕತೆ ಪ್ರಸ್ತಾವ ಈಗ ಉಕ್ರೇನ್ , ಯುರೋಪಿಯನ್ ಒಕ್ಕೂಟದ ನಿದ್ದೆಗೆಡಿಸಿದೆ. ಅಮೆರಿಕದ ಶಾಂತಿ ಒಪ್ಪಂದದ ಪ್ರಸ್ತಾವನೆ ಪ್ರಕಾರ, ಯುದ್ಧದಲ್ಲಿ ರಷ್ಯಾ ಈಗಾಗಲೇ ವಶಕ್ಕೆ ಪಡೆದಿರುವ ಉಕ್ರೇನ್ ಕೆಲವು ಪ್ರದೇಶವನ್ನು ಮಾಸ್ಕೋಗೆ ಹಸ್ತಾಂತರಿಸುವಂತೆ ಮತ್ತು ಅದರ ಸೈನ್ಯವನ್ನು ಕಡಿಮೆ ಮಾಡುವಂತೆ ಒತ್ತಡ ಹೇರಲಾಗಿದೆ. ಉಕ್ರೇನ್ ಅನ್ನು ಎಂದಿಗೂ ನ್ಯಾಟೊ ಮಿಲಿಟರಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಈ ಹಿಂದಿನ ಯುರೋಪಿನ ಒಪ್ಪಂದವನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿದೆ.
ಜಿನೀವಾದಲ್ಲಿ ಅಮೆರಿಕ ಮತ್ತು ಉಕ್ರೇನಿಯನ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯಲ್ಲಿ ಉಕ್ರೇನ್ ಅಧ್ಯಕ್ಷರ ಸಲಹೆಗಾರ ಭಾಗಿಯಾಗಿದ್ದು, ಯೋಜನೆಯ ಬಹುತೇಕ ಎಲ್ಲಾ ಅಂಶಗಳನ್ನು ಚರ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭೂಪ್ರದೇಶದ ವಿಚಾರದಲ್ಲಿ ದೇಶದ ಮುಖ್ಯಸ್ಥರ ಮಟ್ಟದಲ್ಲಿ ಮಾತ್ರ ನಿರ್ಧರಿಸಬಹುದು ಎಂದು ತಿಳಿಸಿದೆ.
ಉಕ್ರೇನ್‌ಗೆ ಸಂಬಂಧಿಸಿದ ಯಾವುದೇ ಒಪ್ಪಂದದಲ್ಲಿ ಭದ್ರತಾ ಖಾತರಿಗಳು ಮುಖ್ಯವಾಗಿದೆ. ಈ ಯೋಜನೆಯಲ್ಲಿ ಅಮೆರಿಕ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ನಂತರ ಉಕ್ರೇನ್ ಮತ್ತು ಅಮೆರಿಕದ ನಾಯಕರು ಭೇಟಿಮಾಡಿದ ನಂತರ ಯೋಜನೆಯನ್ನು ರಷ್ಯಾಕ್ಕೆ ಪ್ರಸ್ತುತಪಡಿಸಲಾಗುವುದು ಎಂದು ಅಲೆಕ್ಸಾಂಡರ್ ಬೆವ್ಜ್ ತಿಳಿಸಿದ್ದಾರೆ. ಈ ಮಾತುಕತೆಯಲ್ಲಿ ಯಾವುದೇ ರಾಜಿಗೆ ಪ್ರತಿಯಾಗಿ ಉಕ್ರೇನ್ ಏನು ಮಾಡಬೇಕು ಎಂದು ಬೆವ್ಜ್ ತಿಳಿಸಿಲ್ಲ.
