ಉದಯವಾಹಿನಿ, ಮುಂಬಯಿ : ತಂದೆಗೆ ಅನಾರೋಗ್ಯ ಹಿನ್ನೆಲೆ ನಡೆಯಬೇಕಿದ್ದ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಅವರ ಮದುವೆ ಮುಂದೂಡಿಕೆ ಬೆನ್ನಲ್ಲೇ ಅವರ ಭಾವಿ ಪತಿ ಪಾಲಶ್‌ ಮುಚ್ಚಲ್‌ ಅವರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ. ಇದರ ಮಧ್ಯೆ ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೊಗಳನ್ನು ಸ್ಮೃತಿ ಅಳಿಸಿ ಹಾಕಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸ್ಮೃತಿ ಮಂಧನಾ ಮನೆಯಲ್ಲಿ ಮೆಹಂದಿ, ಹಳದಿ, ಸಂಗೀತ್ ಸೇರಿದಂತೆ ಹಲವು ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಭಾನುವಾರ(ನ.23)ರಂದು ಮಹಾರಾಷ್ಟ್ರದ ಹೂಟ್ಟೂರಾದ ಸಾಂಗ್ಲಿಯಲ್ಲಿ ಮದುವೆ ಆಯೋಜನೆಗೊಂಡಿತ್ತು. ಆದರೆ ಬೆಳಗ್ಗೆ ಉಪಾಹರ ಸೇವಿಸಿದ ಸ್ಮೃತಿ ಮಂಧಾನ ತಂದೆ ಅಸ್ವಸ್ಥಗೊಂಡಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆ ದಾಖಲು ಮಾಡಿದ್ದರು. ಈ ವೇಳೆ ಶ್ರೀನಿವಾಸ್ ಮಂಧಾನಗೆ ಹೃದಯಾಘಾತವಾಗಿರುವುದು ಪತ್ತೆಯಾಗಿತ್ತು. ಹೀಗಾಗಿ ಮದುವೆ ಸಮಾರಂಭವನ್ನು ಮುಂದೂಡಲಾಗಿತ್ತು.
ಇದೀಗ ಸ್ಮೃತಿ ಅವರ ಭಾವಿ ಪತಿ ಪಾಲಶ್‌ಗೆ ವೈರಲ್‌ ಸೋಂಕು ಮತ್ತು ಅಸಿಡಿಟಿ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಮಸ್ಯೆ ಹೆಚ್ಚು ಗಂಭೀರವಾಗಿರದ ಕಾರಣ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಈ ನಡುವೆ ಮಂಧನಾ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್‌ ಮಾಡಿದ್ದಾರೆ.
ತಂದೆಯವರ ಚೇತರಿಕೆವರೆಗೆ ಮದುವೆಯಾಗದಿರಲು ಸ್ಮೃತಿ ನಿರ್ಧರಿಸಿದ್ದಾರೆ ಎಂದು ಮಂದಾನ ಅವರ ಮ್ಯಾನೇಜರ್‌ ತುಹೀನ್‌ ಮಿಶ್ರಾ ಮಾಧ್ಯಮದ ಮುಂದೆ ಹೇಳಿದ್ದರು. ಆದರೆ ಮದುವೆ ಸಂಭ್ರಮದ ಹಲವು ವಿಡಿಯೋಗಳನ್ನು ಸ್ಮೃತಿ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇವರ ಜತೆಗೆ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾದ ಇತರ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗ್ಸ್‌, ಶ್ರೇಯಾಂಕಾ ಪಾಟೀಲ್‌ ಸೇರಿ ಹಲವು ಸ್ನೇಹಿತೆಯರು ಸ್ಮೃತಿ ನಿಶ್ಚಿತಾರ್ಥದ ವಿಷಯ ಬಹಿರಂಗಪಡಿಸಲು ಮಾಡಿದ್ದ ವಿಡಿಯೋವನ್ನು ಕೂಡ ತಮ್ಮ ಖಾತೆಗಳಿಂದ ಡಿಲೀಟ್‌ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು ಸ್ಮೃತಿ ಅವರು ಮದೆವೆಯಾಗದಿರಲು ನಿರ್ಧರಿಸಿ ದಂತಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!