ಉದಯವಾಹಿನಿ, ವಿಜಯವಾಡ: ಮಕ್ಕಳ ಮುಂದೆ ಅಶ್ಲೀಲ ದೃಶ್ಯಗಳನ್ನು ಪ್ರದರ್ಶನ ಮಾಡುವುದು ಕಾನೂನು ನಿಯಮ ಬಾಹಿರವಾಗಿದೆ. ಸಿನಿಮಾ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೂಡ ಈ ನಿಯಮ ಅನ್ವಯವಾಗಲಿದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಮಕ್ಕಳ‌ ಮನಸ್ಸಿಗೆ ಇಂತಹ ವಿಚಾರಗಳು ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಕಠಿಣ ನಿಯಮಗಳು ಜಾರಿಯಾಗಿವೆ. ಹಾಗಿದ್ದರೂ ಈ ನಿಯಮ ಆಗಾಗ ಉಲ್ಲಂಘನೆ ಆಗುತ್ತಲೇ ಇರುತ್ತದೆ. ಅಂತೆಯೇ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬ ಮಹಿಳೆಯ ಜೊತೆಗೆ ಮಕ್ಕಳ ಮುಂದೆ ಅಶ್ಲೀಲ ನೃತ್ಯ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಅಶ್ಲೀಲ ನೃತ್ಯ ಮಾಡಿದ್ದ ಸಿಬಂದಿ ವಜಾಗೊಳಿಸುವಂತೆ ಸ್ಥಳೀಯ ಪೊಲೀಸರಿಗೆ ಕೃಷ್ಣ ಜಿಲ್ಲೆಯ ಎಸ್. ಪಿ. ವಿದ್ಯಾಸಾಗರ ನಾಯ್ಡು ಅವರು ಆದೇಶ ಹೊರಡಿಸಿದ್ದಾರೆ. ಸಿಬಂದಿಯನ್ನು ಸಮಗ್ರ ತನಿಖೆ ನಡೆಸಿ ಈ ಬಗ್ಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ.
ವಿಜಯವಾಡದಲ್ಲಿ ಗೃಹರಕ್ಷಕದಳದ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಜಯ್ ಕುಮಾರ್ ಅವರು ಮಕ್ಕಳ ಮುಂದೆ ಮಹಿಳೆ ಜೊತೆ ಅಸಭ್ಯವಾಗಿ ಅಶ್ಲೀಲ ನೃತ್ಯ ಮಾಡಿದ್ದಾರೆ. ಇದು ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆ ತರುವ ನಡವಳಿಕೆಯಾಗಿದೆ ಈ ಬಗ್ಗೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಆರೋಪಿಸಿ, ಜಿಲ್ಲಾ ಎಸ್ಪಿ ವಿ. ವಿದ್ಯಾಸಾಗರ್ ನಾಯ್ಡು ಅವರು ಸಿಬಂದಿಯನ್ನು ಅಮಾನತುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!