ಉದಯವಾಹಿನಿ, ಟೋರ್ನ್ ಡೆನಿಮ್ ಜಾಕೆಟ್‌ಗಳು ಈ ವಿಂಟರ್ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿವೆ. ಸೆಲೆಬ್ರಿಟಿಗಳ ವಾರ್ಡ್ರೋಬ್‌ಗೆ ಸೇರಿವೆ. ಹಾಲಿಡೇ, ಪಾರ್ಟಿ, ಕ್ಯಾಶುವಲ್ ಔಟಿಂಗ್‌ನಲ್ಲಿಈ ಟೋರ್ನ್ ಡೆನಿಮ್ ಜಾಕೆಟ್‌ಗಳು, ಹಾಲಿವುಡ್ ಮಾತ್ರವಲ್ಲ, ಬಾಲಿವುಡ್, ಸ್ಯಾಂಡಲ್‌ವುಡ್ ತಾರೆಯರನ್ನು ಸವಾರಿ ಮಾಡತೊಡಗಿವೆ. ಟೋರ್ನ್ ಡೆನಿಮ್ ಜಾಕೆಟ್‌ಗಳು ನೋಡಲು ರಫ್ ಅಂಡ್ ಟಫ್ ಲುಕ್ ನೀಡುತ್ತವೆ. ಇತರೇ ಸಾಫ್ಟ್ ಮೆಟಿರೀಯಲ್‌ನಂತೆ ಸ್ಲೋಪಿಯಾಗಿ ಜಾರುವುದಿಲ್ಲ. ಔಟಿಂಗ್ , ಪಿಕ್ನಿಕ್‌ಗೆ ಇವು ಹೇಳಿ ಮಾಡಿಸಿದಂತಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಿಡಿ, ಮಿನಿ, ಶಾರ್ಟ್, ಮೀಡಿಯಂ, ಲಾಂಗ್ ಸ್ಕರ್ಟ್ಸ್ ಹೀಗೆ ಈ ಡೆನಿಮ್ ಜಾಕೆಟ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಬಹುದು. ಸಿಂಪಲ್ ಟೀ ಶರ್ಟ್ ಮೇಲೆ ಧರಿಸಿ ಲೇಯರ್ ಲುಕ್ ನೀಡಬಹುದು. ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುತ್ತವೆ. ಅಂದಹಾಗೆ, ಮೊದಲೆಲ್ಲಾ ಟೀನೇಜ್ ಯುವತಿಯರು ಮಾತ್ರ ಟೋರ್ನ್ ಜಾಕೆಟ್ ಪ್ರಿಯರಾಗಿದ್ದರು. ಇದೀಗ ಟ್ರೆಂಡ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲಾ ವಯಸ್ಸಿನ ಮಾನಿನಿಯರು ಕೂಡ ಡೆನಿಮ್ ಟೋರ್ನ್ ಜಾಕೆಟ್‌ನ ಪ್ರೇಮಿಗಳಾಗಿದ್ದಾರೆ. ಲಾಂಗ್ ಟೋರ್ನ್ ಡೆನಿಮ್ ಜಾಕೆಟನ್ನು ಫ್ರಾಕ್ ಹಾಗೂ ಸ್ಟಿಲ್ಲೋಟ್ಸ್ ಮೇಲೆ ಧರಿಸುವುದು ಹೆಚ್ಚಾಗತೊಡಗಿದೆ. ಎರಡು ಪಾಕೆಟ್ಸ್ ಹಾಗೂ ಕೊಂಚ ಪ್ಯಾಚ್ ವರ್ಕ್ ಇರುವಂತಹ ಡೆನಿಮ್ ಲಾಂಗ್ ಟೋರ್ನ್ ಜಾಕೆಟ್ ಕೊಂಚ ಹೆವ್ವಿಯಾಗಿರುತ್ತವೆ. ಆದರೆ, ಬೆಚ್ಚಗಿನ ಫೀಲ್ ನೀಡುತ್ತವೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ಜೆನ್. ರಿಸಿದರೇ ಟಮ್ಮಿ ಭಾಗದಿಂದ ಮೇಲ್ಭಾಗಕ್ಕೆ ಕೂರುವ ಕ್ರಾಪ್ ಟೋರ್ನ್ ಡೆನಿಮ್ ಜಾಕೆಟ್‌ಗಳು ಸದ್ಯ ಟೀನೇಜ್ ಹುಡುಗಿಯರ ಹಾಗೂ ಹಾಲಿವುಡ್ ಸೆಲೆಬ್ರಿಟಿಗಳ ಫೇವರೆಟ್ ಜಾಕೆಟ್‌ಗಳ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
